ಬಂಟ್ವಾಳ: ಸೌತ್ ಕೆನರಾ ಫೋಟೊಗ್ರಾಪರ್ಸ ಎಸೋಸಿಯೇಸನ್ ಬೆಳ್ತಂಗಡಿ ವಲಯದ ವತಿಯಿಂದ ಗುರುವಾಯನಕೆರೆ ಛಾಯ ಭವನದಲ್ಲಿ ಫೆ.15 ರಂದು ಶುಕ್ರವಾರ ಉಗ್ರರ ದಾಳಿಗೆ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಸೌತ್ ಕೆನರಾ ಫೋಟೊಗ್ರಾಪರ್ಸ ಎಸೋಸಿಯೇಸನ್ ದ.ಕ.ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್, ಜಿಲ್ಲಾ ಪತ್ರಿಕಾ ಪ್ರತಿನಿಧಿ ಸುರೇಶ್ ಬಿ. ಕೌಡಂಗೆ, ಬೆಳ್ತಂಗಡಿ ವಲಯದ ಗೌರವಾಧ್ಯಕ್ಷ ಸುಂದರ್ ಕೆ ಬೆಳ್ತಂಗಡಿ, ಅಧ್ಯಕ್ಷ ಕಿರಣ್ ಕುಮಾರ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ನಾರಾವಿ, ಉಪಾಧ್ಯಕ್ಷ ದಾಮೋದರ್ ಗುರುವಾಯನಕೆರೆ, ಗಣೇಶ್ ವೇಣೂರು. ಬಾಲಕೃಷ್ಣ ನೇಸರ ಪೆರಲ್ದರಕಟ್ಟೆ, ಸಚಿನ್ ಉಜಿರೆ ವಲಯದ ಪತ್ರಿಕಾ ಪ್ರತಿನಿಧಿ ಮನು ಮದ್ದಡ್ಕ ಉಪಸ್ಥಿತರಿದ್ದರು.