ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದ ಮಹಿಳೆಯೊಬ್ಬರಿಗೆ ಕೊವಿಡ್- 19 ಪಾಸಿಟಿವ್ ದೃಢವಾದ ಹಿನ್ನಲೆ ಶಿರ್ಲಾಲು ಸುತ್ತಮುತ್ತಲಿನ ಕೆಲವು ಮನೆಗಳನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯನ್ನಾಗಿ ಜಿಲ್ಲಾಡಳಿತ ಘೋಷಿಸಿದೆ. ಈ ವ್ಯಾಪ್ತಿಯಲ್ಲಿ ಬರುವ ಮನೆಗಳನ್ನು ಹಾಗೂ ಗ್ರಾಮದ ತೀರ ಅಶಕ್ತ ಕುಟುಂಬಗಳನ್ನು ಗುರುತಿಸಿ ದಾನಿಗಳಾದ ಸೌದಿ ಅರೇಬಿಯಾದ ಉದ್ಯೋಗಿ ಸುರೇಶ್ ಕರ್ದೋಟ್ಟು ಹಾಗೂ ಕೆನರಾ ಬ್ಯಾಂಕ್ ಅಧಿಕಾರಿ ಕಿಶೋರ್ ಕುಮಾರ್ ಅವರ ಸಹಕಾರದೊಂದಿಗೆ ದಿನ ಬಳಕೆಯ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ದಿನೇಶ್ ಕುಮಾರ್ ಕರ್ದೋಟ್ಟು, ಬೆಳ್ತಂಗಡಿ ಯುವವಾಹಿನಿ(ರಿ) ಘಟಕದ ಅಧ್ಯಕ್ಷರಾದ ಎಂ. ಕೆ. ಪ್ರಸಾದ್, ರಕ್ಷಿತ್ ಕುಮಾರ್, ಯುವವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಜ್ಞಾನೇಶ್ ಕುಮಾರ್ ಕಟ್ಟ, ಕಾರ್ಯದರ್ಶಿ ರಂಜಿತ್ ಪೂಜಾರಿ ಅಜಿರೋಳಿ, ರಾಜೇಶ್ ಬರಮೇಲು ಮುಂತಾದವರು ಉಪಸ್ಥಿತರಿದ್ದರು.

