ಶಿರ್ಲಾಲು: ಶಿರ್ಲಾಲು ಗ್ರಾಮದ ಮಹಿಳೆಯೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಂತಹ ಹಿನ್ನೆಲೆಯಲ್ಲಿ ಶಿರ್ಲಾಲು ಸುತ್ತಮುತ್ತಲಿನ ಕೆಲವು ಮನೆಗಳನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯನ್ನಾಗಿ ಜಿಲ್ಲಾಡಳಿತ ಘೋಷಿಸಿರುವುದರಿಂದ ಅಲ್ಲಿ ಕಂಟೈನ್ಮೆಂಟ್ ಝೋನ್’ನಲ್ಲಿ ಇರುವ ಮನೆಗಲಿಗೆ ಶಿರ್ಲಾಲಿನ ಯುವವಾಹಿನಿ ಸಂಚಲನ ಸಮಿತಿಯವತಿಯಿಂದ ಅಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.


ಆಹಾರ ಸಾಮಾಗ್ರಿಗಳ ಕಿಟ್ ವಿತರಣ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಓ. ಮತ್ತು ಸಿಬ್ಬಂದಿ ವರ್ಗ, ಶಿರ್ಲಾಲು ಸಂಚಲನ ಸಮಿತಿಯ ಅಧ್ಯಕ್ಷ ಜ್ಞಾನೇಶ್, ಕಾರ್ಯದರ್ಶಿ ರಂಜಿತ್ ಅಜಿರೋಳಿ, ತಾಲೂಕು ಯುವವಾಹಿನಿ ಅಧ್ಯಕ್ಷ ಎಂ.ಕೆ. ಪ್ರಸಾದ್, ಗುರುನಾರಾಯಣ ತತ್ವ ಪ್ರಚಾರಕ ಸದಾಶಿವ ಊರ, ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಕೋಶಾಧಿಕಾರಿ ಚಿದಾನಂದ ಎಲ್ದಕ್ಕ, ಯುವಬಿಲ್ಲವ ವೇದಿಕೆಯ ಅಧ್ಯಕ್ಷ ನವೀನ್ ಕಟ್ರಬೈಲು, ಕಾರ್ಯದರ್ಶಿ ಯತೀಶ್, ದಿನೇಶ್ ಕರ್ದೋಟ್ಟು, ಜಯಕುಮಾರ್, ಭುವನೇಂದ್ರ, ಶಶಿಕಲಾ, ಉಪಸ್ಥಿತರಿದ್ದರು.

