ವಿಟ್ಲ: ಅಭಿವೃದ್ಧಿ ಹೊಂದಿರುವ ರಸ್ತೆಗಳು ಕೆಲವೇ ದಿನಗಳಲ್ಲಿ ಸೀಮಿತವಾಗಬಾರದು. ಅದು ಶಾಶ್ವತವಾಗಿ ಉಳಿಸುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ. ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಮಂಗಳವಾರ ನಬಾರ್ಡ್ ಯೋಜನೆಯ ಒಂದು ಕೋ. ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ಮಂಗಳಪದವು-ಮಾಮೇಶ್ವರ-ರಾಯರಬೆಟ್ಟು ರಸ್ತೆಗೆ ಶಿಲಾನ್ಯಾಸ ನಡೆಸಿ ಮಾತನಾಡಿದರು.
ಮಂಗಳಪದವು-ಅನಂತಾಡಿ ರಸ್ತೆ ಸರ್ವಋತು ರಸ್ತೆಯಾಗಬೇಕು ಎಂಬ ದೃಷ್ಟಿಯಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಎರಡು ಸೇತುವೆ ನಿರ್‍ಮಾಣ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿ ನಡೆಯಲಿದೆ. ಮುಂದಿನ ಮಳೆಗಾಲದ ಒಳಗಡೆ ಈ ರಸ್ತೆ ಕಾಮಗಾರಿ ಮುಗಿಯಲಿದೆ. ಸೇತುವೆಗೆ ೫೮ ಲಕ್ಷ ಹಾಗೂ ರಸ್ತೆಗೆ ೪೨ ಲಕ್ಷ ರೂ. ಇಡಲಾಗಿದೆ. ಬಂಟ್ವಾಳ ಶಾಸಕರು ಹಾಗೂ ನಾನು ಜತೆಯಾಗಿ ಈ ರಸ್ತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಟಿ ಶೈಲಜಾ ಭಟ್, ವಿಟ್ಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ನಾಯ್ಕ, ಮಾಜಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಸದಸ್ಯರಾದ ಇಂದಿರಾ ಅಡ್ಯಾಳಿ, ರಾಮ್‌ದಾಸ್ ಶೆಣೈ, ಮಂಜುನಾಥ ಕಲ್ಲಕಟ್ಟ, ಶ್ರೀಕೃಷ್ಣ, ಲೋಕನಾಥ ಶೆಟ್ಟಿ, ಬಿಜೆಪಿ ನಗರ ಅಧ್ಯಕ್ಷ ಮೋಹನದಾಸ ಉಕ್ಕುಡ, ಊರಿನ ಹಿರಿಯರಾದ ರಾಮಣ್ಣ ಪೂಜಾರಿ ಮಚ್ಚ, ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಕೆ.ಎಸ್ ಸಂಕಪ್ಪ ಗೌಡ ಕೈಂತಿಲ, ವೀರಪ್ಪ ರಾಯರಬೆಟ್ಟು, ಸಂಜೀವ ಪೂಜಾರಿ ನಿಡ್ಯ, ಮೋನಪ್ಪ ರಾಯರಬೆಟ್ಟು, ದಿನೇಶ್ ಮಾಮೇಶ್ವರ, ಕರುಣಾಕರ ನಾಯ್ತೋಟ್ಟು, ಉದಯ ನಾಯ್ತೋಟ್ಟು, ಲಕ್ಷ್ಮಣ ಪೂಜಾರಿ, ಕೇಶವ ಪಂಜುರ್ಲಿಕೋಡಿ, ಎಂಜಿನಿಯರ್ ನಾಗೇಶ್, ಗುತ್ತಿಗೆದಾರ ನಾರಾಯಣ ಪೂಜಾರಿ, ಉಪಸ್ಥಿತರಿದ್ದರು.
