ಮೈಸೂರು: ಪತ್ರಕರ್ತರ ಹಲವು ವರ್ಷಗಳ ಕನಾಸಾದ ಕಾರ್ಯನಿರತ ಪತ್ರಕರ್ತರ ಸಂಘದ ಹೊಸ್ನಾಳ್ಳಿಯಲ್ಲಿರುವ 50 ಸೆಂಟ್ಸ್ ನಿವೇಶನದಲ್ಲಿ ಅತೀ ಶೀಘ್ರದಲ್ಲಿ ಸುಸಜ್ಜಿತ ಭವನವನ್ನು ನಿರ್ಮಿಸಲಾಗುವುದು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ಮೈಸೂರು ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆದ 34 ನೇ ಪತ್ರಕರ್ತರ ಸಮ್ಮೇಳನದ ಎರಡನೇ ದಿನವಾದ ಶನಿವಾರ ಪ್ರರಿನಿಧಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೃತ್ತಿಪರ ಪತ್ರಕರ್ತರಿಗೆ ಯಾವುದೇ ತೊಂದರೆಯಾಗದೆ ಸದಸ್ಯತ್ವ ನೀಡುವಂತೆ ಸಲಹೆ ನೀಡಿದ ಅವರು ಸಂಘವನ್ನು ಸದೃಢಗೊಳಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಪುಂಡಲೀಕ ಛೀ.ಬಾಳೋಜಿ, ಕಾರ್ಯದರ್ಶಿ ಸಂಜೀವರಾವ್ ಬಿ.ಕುಲಕರ್ಣಿ, ಖಜಾಂಚಿ ಡಾ.ಕೆ.ಉಮೇಶ್ವರ,ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪಂಕಜ್ ಕುಮಾರ್ ಪಾಂಡೆ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ವರದಿ ಮಂಡಿಸಿದರು. ಉಪಾಧ್ಯಕ್ಷ ಮತ್ತೀಕೆರೆ ಜಯರಾಂ ಪ್ರಾಸ್ತಾವನೆಗೈದರು. ಇದಕ್ಕೂ ಮೊದಲು ಸಂಪಾದಕರ ಸಮ್ಮಿಲನ, ಸಂವಾದ ,ಮಾಧ್ಯಮ ಮತ್ತು ಡಿಜಿಲೀಕರಣದ ಸವಾಲುಗಳು ಎಂಬ ವಿಚಾರಗಳ ಬಗ್ಗೆ ಗೋಷ್ಠಿಗಳು ನಡೆಯಿತು.
