ಬಂಟ್ವಾಳ: ಅಮ್ಟೂರು ಗ್ರಾಮದ ಪೂವಳ ರಸ್ತೆಯ ಕಾಂಕ್ರೀಟ್ ಕರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ ನಡೆಯಿತು.
ತೀರಾ ದುರಸ್ತಿಯ ಲ್ಲಿದ್ದ ಕಲ್ಲಡ್ಕ ಸಮೀಪದ ಅಮ್ಟೂರು ಗ್ರಾಮದ ಪೂವಳ ರಸ್ತೆಯ ಕಾಂಕ್ರೀಟ್ ಕರಣ ಕಾಮಗಾರಿಗೆ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಶಿಲಾನ್ಯಾಸ ನೆರವೇರಿಸಿದರು.



ಶಾಸಕರ ನಿಧಿಯಿಂದ ಹತ್ತುಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪೂವಳ ರಸ್ತೆಯ ಕಾಂಕ್ರೀಟ್ ಕರಣಕ್ಕೆ ಶಾಸಕರು ಅನುದಾನ ಬಿಡುಗಡೆಗೊಳಿಸಿ, ಈ ಭಾಗದ ಜನರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ ಎಂದು ಅವರು ಹೇಳಿದರು.
ಮಾಜಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಅಮ್ಟೂರು ಮಾತನಾಡಿ ಕಳೆದ ಅರುವತ್ತೈದು ವರ್ಷಗಳಿಂದ ಈ ರಸ್ತೆಗೆ ಅಲ್ಲಿಯ ಗ್ರಾಮಸ್ಥರು ಹಾಗೂ ಈ ಭಾಗದ ಬಿಜೆಪಿ ಮುಖಂಡ ಗೋಪಾಲಕೃಷ್ಣ ಪೂವಳ ಅವರು ರಸ್ತೆ ದುರಸ್ತಿ ಗೆ ಮನವಿ ನೀಡುತ್ತಾ ಬಂದಿದ್ದಾರೆ. ಇವರ ಪ್ರಯತ್ನಕ್ಕೆ ಕೊನೆಗೆ ಶಾಸಕ ರಾಜೇಶ್ ನಾಯಕ್ ಅವರು ಸ್ಪಂದನೆ ನೀಡಿ ರಸ್ತೆಯ ಅಭಿವೃದ್ಧಿ ಗೆ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದರು.
ಇದಲ್ಲದೆ ಅಮ್ಟೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶಾಸಕರು ಅನುದಾನ ಬಿಡುಗಡೆಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ರಾದ ಜಯಲಕ್ಮಿ ಭಟ್, ತಾ.ಪಂ.ಸದಸ್ಯ ಮಹಾಬಲ ಆಳ್ವ, ಗ್ರಾ.ಪಂ.ಉಪಾಧ್ಯಕ್ಷ ಮಹಮ್ಮದ್ ಮುಸ್ತಫಾ ಗ್ರಾ.ಪಂ.ಸದಸ್ಯ ರಾದ ಗೋಪಾಲಕೃಷ್ಣ ಪೂವಳ, ರಾಜೇಶ್ ಕೊಟ್ಟಾರಿ, ಗೋಪಾಲ ಪೂಜಾರಿ, ಜಯಂತ್ ಗೌಡ, ಮೋನಪ್ಪ ದೇವಸ್ಯ, ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಮಡ್ಲಮಜಲು, ಉದ್ಯಮಿ ಜಗದೀಶ್ ಬೆಜ್ಜಾರ್, ಹಾಗೂ ಗ್ರಾಮದ ಪ್ರಮುಖರಾದ ರಮೇಶ್ ಭಟ್, ಸೀತಾರಾಮ ಭಟ್ ಮತ್ತಿತರರು ಉಪಸ್ಥಿತರಿದ್ದರು.