ವಿಟ್ಲ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂ. ಮತ್ತು ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಮಾಣಿ ಗ್ರಾ.ಪಂ. ನಲ್ಲಿ ನಡೆದ ಕಾನೂನು ಸಾಕ್ಷರಥಾ ಮತ್ತು ಸಂಚಾರಿ ನ್ಯಾಯಾಲಯದ ಕಾನೂನು ಮಾಹಿತಿ ಶಿಬಿರವನ್ನು ಸಹಾಯಕ ಸರಕಾರಿ ಅಭಿಯೋಜಕ ಹಾಗೂ ತಾ.ಕಾ.ಸೇ.ಸಮಿತಿಯ ಕಾರ್‍ಯನಿರ್ವಾಹಕ ಕಾರ್‍ಯದರ್ಶಿ ಎಂ.ಎಸ್.ಆಲಿ ಉದ್ಘಾಟಿಸಿದರು.
ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ವಕೀಲ ದೀಪಕ್ ಪೆರಾಜೆ ಮೋಟಾರು ವಾಹನ ಕಾಯಿದೆ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಹಾಯಕ ಸರಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ, ವಕೀಲರು ಗಳಾದ ಜನಾರ್ಧನ್ ಶೆಟ್ಟಿ, ಶೈಲಜಾ ರಾಜೇಶ್, ಗಣೇಶ್ ಪೈ, ಶ್ರೀಧರ ಪೈ, ಪ್ರಶಾಂತ್, ಸತೀಶ್ ಬಿ., ಪಂ.ಸದಸ್ಯ ಇಬ್ರಾಹಿಂ ಕೆ. ಮತ್ತಿತರರು ಉಪಸ್ಥಿತರಿದ್ದರು.

