Monday, February 17, 2025

ವಾಕ್ ಶ್ರವಣದೋಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಕಲ್ಲಡ್ಕ: ಪ್ರತಿಯೊಂದು ಮಗುವಿನಲ್ಲಿಯೂ ಉತ್ತಮ ಅಂಶಗಳಿದ್ದು ಅದನ್ನು ಕಾಣುವ ಮತ್ತು ಕಂಡುಹಿಡಿಯುವ ಮನಸ್ಸು ಮುಖ್ಯ ಯಾವುದೇ ಒಂದು ಸಾಧನೆಯನ್ನು ಅಂಕಗಳಿಂದ ಅಳಿಯುವುದು ಸರಿಯಲ್ಲ ವಿಶೇಷ ಅಗತ್ಯವುಳ್ಳ ಮಗುವಿನಲ್ಲೂ ಅಸಾಧಾರಣವಾದ ಸಾಧನೆಯನ್ನು ಮಾಡುವ ಛಲ ಇದೆ ಅದನ್ನು ಎಳವೆಯಲ್ಲಿ ಗುರುತಿಸಿ ಪ್ರೋತ್ಸಾಹ ನೀಡಿದಾಗ ಮತ್ತು ಆ ಸಾಧನೆಗೆ ನೀರು ಎರೆದಾಗ ಉತ್ತಮ ಫಲವನ್ನು ಕಂಡುಕೊಳ್ಳಲು ಸಾಧ್ಯ ವಿಶೇಷ ಅಗತ್ಯವುಳ್ಳ ಮಗು ಸಮಾಜದಲ್ಲಿ ಎಲ್ಲರ ಜೊತೆಗೆ ಬೆರೆಯುವ ಅವಕಾಶ ನೀಡಿ ಆ ಮಗು ಕೂಡ ಇತರ ಮಗುವಿನಂತೆ ಸುಂದರ ಬದುಕು ಕಾಣಲು ಸಮಾಜದ ಪ್ರೋತ್ಸಾಹ ಅತಿ ಅಗತ್ಯವಾಗಿದೆ ಎಂದು ಲಯನ್ಸ ಕ್ಲಬ್ ವಿಟ್ಲ ಇಲ್ಲಿನ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ ಗೌಡ ರವರು ಹೇಳಿದರು.

ಅವರು ದ.ಕ.ಜಿ.ಪಂ.ಹಿ. ಪ್ರಾ. ಶಾಲೆ ಮಜಿ ವೀರಕಂಬ ಇಲ್ಲಿ ಶಿಕ್ಷಣ ಇಲಾಖೆ, ಲಯನ್ಸ್ ಕ್ಲಬ್ ವಿಟ್ಲ, ದಕ್ಷಿಣ ಕನ್ನಡ ಕದಳಿ ಮಹಿಳಾ ವೇದಿಕೆ ಹಾಗೂ ವಾಕ್ ಮತ್ತು ಶ್ರವಣ ವಿಭಾಗ ಯನೆಪೋಯ ಕಾಲೇಜು ಹಾಸ್ಪಿಟಲ್ ದೇರಳಕಟ್ಟೆ ಇದರ ಸಹಯೋಗದಲ್ಲಿ ವಾಕ್ ಶ್ರವಣದೋಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ 2024 ಇದನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಶಿಬಿರಗಳು ಗ್ರಾಮ ಹಂತದಲ್ಲಿ ನಡೆದಾಗ ಮೂಲೆ ಮೂಲೆಯ ವ್ಯಕ್ತಿಗಳಿಗೆ ತಮ್ಮ ಆರೋಗ್ಯ ಸಮಸ್ಯೆಯನ್ನು ತಕ್ಷಣದಲ್ಲಿ ಕಂಡುಹಿಡಿದು ಸುಧಾರಿಸಲು ನೆರವಾಗುತ್ತದೆ ಈ ರೀತಿಯಾಗಿ ಯನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುತ್ತಿವೆ ಇವರ ಆರೋಗ್ಯ ಕಾಳಜಿಯು ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಇವರು ಮಾತನಾಡಿದರು.

ಮಗುವಿನ ಚಟುವಟಿಕೆ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿಯೇ ಮಗುವಿನ ಬಗ್ಗೆ ತಿಳುವಳಿಕೆ ಪಡೆದುಕೊಂಡು ಅದರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿದಾಗ ವಿಶೇಷ ಅಗತ್ಯವುಳ್ಳ ಮಗುವಿನ ಬಗ್ಗೆ ಇರುವ ದೋಷವನ್ನು ನಿವಾರಿಸಲು ಸುಲಭವಾಗುತ್ತದೆ. ಪ್ರತಿಯೊಂದು ಮಗು ವಿಶೇಷವಾಗಿದೆ ಮಗುವಿನ ಬೆಳವಣಿಗೆಯು ಗಮನಾಹ೯ವಾದ ಬದಲಾವಣೆಯನ್ನು ತಕ್ಷಣ ಸ್ಪಂದನೆಗೆ ಒಳಪಡಿಸಿದಾಗ ಮಗು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಮಗುವಿನ ಮಾನಸಿಕ ಬೌದ್ಧಿಕ ಹಾಗೂ ದೈಹಿಕ ಬದಲಾವಣೆ ಬಗ್ಗೆ ಪೋಷಕರು ಗಮನಹರಿಸಬೇಕು ಮತ್ತು ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನ ಪಡಬೇಕು ಎಂದು ದಕ್ಷಿಣ ಕನ್ನಡ ಕದಳಿ ಮಹಿಳಾ ವೇದಿಕೆ ಆದ್ಯೆಕ್ಷೆ ಬಂಟ್ವಾಳ ತಾಲೂಕು ವಿಶೇಷ ಸಂಪನ್ಮೂಲ ಅಧಿಕಾರಿ ಸುರೇಖಾ ಯಾಳವಾರ ಇವರು ತಮ್ಮ ಪ್ರಸ್ತಾವಿಕ ಮಾತಿನಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ 14 ರಿಂದ 17 ರ ವಯೋಮಿತಿ ಒಳಗಿನ ವಿಶೇಷ ಚೇತನ ಬಾಲಕ ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟದ ಜಾವಲಿನ್ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಸುಜೀರ್ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ಮಾ| ಭವಿಷ್ ಇವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ನಾರುಕೋಡಿ , ವಾಕ್ ಮತ್ತು ಶ್ರವಣ ವಿಭಾಗ ಯನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಎಚ್ ಒ ಡಿ ಶ್ವೇತಾ ಪ್ರಭು, ಮೆಡಿಕಲ್ ಕಾಲೇಜಿನ ನಿಮಲ್ಕಾ, ಮೇಲ್ಕಾರಿನ ಚಂದ್ರಿಕಾ ವೆಜಿಟೇಬಲ್ಸ್ ಇದರ ಮಾಲಕರಾದ ಮಹಮ್ಮದ್ ಶರೀಫ್, ಲಯನ್ಸ್ ಕ್ಲಬ್ ವಿಟ್ಲ ಇಲ್ಲಿನ ನಿಕಟಪೂರ್ವ ಅಧ್ಯಕ್ಷರಾದ ಸುದೇಶ್ ಭಂಡಾರಿ, ವೀರಕಂಬ ಸಮುದಾಯ ಆರೋಗ್ಯ ಅಧಿಕಾರಿ ಹರ್ಷಿತ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಗೌಡ ಮೈರ , ಬಂಡವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಗೌರವ ಅಧ್ಯಕ್ಷರಾದ ರತ್ನಾವತಿ, ಸಂಪನ್ಮೂಲ ವ್ಯಕ್ತಿಗಳಾದ ಕಿರಣಕುಮಾರಿ, ಪ್ರಶಾಂತ್, ರವೀಂದ್ರ ರವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಬೆನಡಿಕ್ಟ ಸ್ವಾಗತಿಸಿ ಸಹ ಶಿಕ್ಷಕಿ ಅನುಷಾ ವಂದಿಸಿ , ಸಹ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.

More from the blog

ಮಕ್ಕಳ ಕಲಾ ಲೋಕದ ಅಧ್ಯಕ್ಷರಾಗಿ ರಮೇಶ ಎಂ ಬಾಯಾರು ಪುನರಾಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ 2025-26ನೇ ಸಾಲಿನ ಅಧ್ಯಕ್ಷರಾಗಿ ಬರಹಗಾರ ರಮೇಶ ಎಂ. ಬಾಯಾರು ಪುನರಾಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಕೆ ನಾಯ್ಕ್‌ ಅಡ್ಯನಡ್ಕ,...

ಬಲ್ಲು ಕೊರಗ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯ ಹಾಗೂ ಜೇನು‌ಕುರುಬರ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿ ಜನ್ ಮನ್ ಯೋಜನೆಯ ಮೂಲಕ 20 ಕೋಟಿ ರೂ ಮಂಜೂರಾಗಿದೆ, ಸಮಾಜದ ಎಲ್ಲಾ ವರ್ಗದವರನ್ನು ಮುಖ್ಯವಾಹಿನಿಗೆ ತರುವುದು...

ಬಂಟ್ವಾಳದಲ್ಲಿ ಸಂತ ಶ್ರೀ ಸೇವಾಲಾಲ ಜಯಂತಿ ಆಚರಣೆ

ಬಂಟ್ವಾಳ : ಭರತ ಖಂಡದ ಧಾರ್ಮಿಕ ರಾಯಾಭಾರಿ ಎಂದೇ ಹೆಸರಾಗಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನಗೆದ್ದವರು. ಸಂತ ಶ್ರೀ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯದ ಆರಾಧ್ಯ ದೈವ...

ಚರಂಡಿಗೆ ಬಿದ್ದ ರಿಕ್ಷಾ : ಚಾಲಕ ಸಾವು, ಮಕ್ಕಳಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ ಪ್ರಯಾಣಿಕ ಮೂವರು ಮಕ್ಕಳಿಗೆ ಗಾಯವಾಗಿರುವ ಘಟನೆ ಅಮ್ಮುಂಜೆಯಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ. ಬಂಟ್ವಾಳ ತಾಲೂಕಿನ ಅಮ್ಮುಂಜೆ...