ಮಾದಕ ದ್ರವ್ಯಗಳಾದ ಗಾಂಜಾಬ್ರೌನ್ ಸುಗರ್ ಅಥವಾ ಯಾವುದೇ ರೂಪದ ಅನಧಿಕೃತ ಡ್ರಗ್ಸ್ ವ್ಯವಹಾರ ಮತ್ತು ಸೇವನೆಯು ಅಪರಾಧವಾಗಿದೆ. ಈ ಕೃತ್ಯಗಳಲ್ಲಿ ತೊಡಗಿದವರಿಗೆ ಕಾನೂನಿನ ಅಡಿಯಲ್ಲಿ ದಂಡ ಮತ್ತು ದಂಡನೆಯು ಇರುತ್ತದೆ. ಒಂದುಬಾರಿ ಡ್ರಗ್ಸ್ ಸೇವಿಸಲು ತೊಡಗಿದರೆ ಮತ್ತೆ ವ್ಯಸನಿಗಳಾಗಿ ಮಾರ್ಪಡುತ್ತದೆ. ಆದುದರಿಂದ ವಿದ್ಯಾರ್ಥಿಗಳಾಗಿರುವಾಗಲೇ ಮಾದಕವ್ಯಸನಿಗಳಾಗದೆ ಶಿಸ್ತುಬ್ದ್ಧರಾಗಿ ಕಲಿತುಕೊಳ್ಳಬೇಕು ಎಂಬುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಎಂ. ಎಸ್. ಹೇಳಿದರು. ಅಲ್ಲದೆ ಪೋಕ್ಸೋಕಾಯಿದೆಯ ಪರಿಣಾಮಗಳನ್ನು ವಿವರಿಸಿದರು. ಅವರು ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಾದಕವ್ಯಸನ ಮಾಹಿತಿ, ಪೋಕ್ಸೋಕಾಯಿದೆ ಮಾಹಿತಿ ಮತ್ತು ಸಂವಿಧಾನ ದಿನದ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಪಾಲ್ಗೊಂಡ ಇನ್ನೋರ್ವ ಅತಿಥಿ ಬಂಟ್ವಾಳ ಗ್ರಾಮಾಂತರ ಠಾಣಾ ಪ್ರೊಬೆಷನರಿ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ ಸಾಮಾಜಿಕ ಜಾಲತಾಣ, ಪೋಕ್ಸೋಕಾಯಿದೆಗಳ ಕುರಿತಾಗಿ ವಿವರ ನೀಡಿದರು.
ಸಮಾರಂಭದಲ್ಲಿ ಸಂವಿಧಾನದ ಮಹತ್ವ, ಪಾಲಿಸಬೇಕಾದ ಕರ್ತವ್ಯಗಳು, ಉಲ್ಲೇಖಿತ ವಿಧಿಗಳ ಕುರಿತಾಗಿ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶಶೆಟ್ಟಿ ಅಳಿಕೆ ಅವರು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರಆಳ್ವ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಮಕ್ಕಳ ವಿಶೇಷ ಘಟಕದ ಲೋಲಾಕ್ಷಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಅಬ್ದುಲ್ ರೆಹಮಾನ್ ಡಿ. ಬಿ. ನಿರೂಪಿಸಿ, ಸ್ವಾಗತಿಸಿದರು. ಹಿಂದಿ ಉಪನ್ಯಾಸಕ ಡಾ| ವಿಶ್ವನಾಥ ಪೂಜಾರಿ ವಂದಿಸಿದರು.


