ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಕಂಪನಿ ನಿಯಮಿತ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಲಯನ್ಸ್ ಕ್ಲಬ್ ವಿಟ್ಲ, ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಚಂದಳಿಕೆ ,ವಿಟ್ಲ ಯಲ್. ಯನ್. ಯಸ್. ಯಂ. ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಕೆ. ಎಂ. ಸಿ. ಹಾಸ್ಪಿಟಲ್ ಅತ್ತಾವರ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವು ನ.1 ರಂದು ಬೆಳಿಗ್ಗೆ 8 ರಿಂದ ಅಪರಾಹ್ನ 12 ಗಂಟೆಯ ವರೆಗೆ ವಿಟ್ಲ ಮಂಗಳ ಮಂಟಪದಲ್ಲಿ ನಡೆಯಲಿದೆ.

ಈ ಶಿಬಿರದಲ್ಲಿ ಎಲುಬು, ಕೀಲು, ಕಣ್ಣು, ಕಿವಿ, ಜನರಲ್ ಮೆಡಿಸಿನ್, ಮಕ್ಕಳ, ಹೆಂಗಸರ, ಹಾಗೂ ಚರ್ಮರೋಗ ಈ ಎಲ್ಲಾ ಕಾಯಿಲೆಗಳ ತಪಾಸಣೆ ಮಾಡಿ ಚಿಕಿತ್ಸೆಗೆ ಸೂಕ್ತ ಸಲಹೆ ಸೂಚನೆ ಹಾಗೂ ಚಿಕಿತ್ಸೆ ನೀಡಲಾಗುವುದು. ಅವಶ್ಯಕತೆ ಉಳ್ಳವರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘಟಕರು ತಿಳಿಸಿದ್ದಾರೆ.

