ವಿಟ್ಲ: ವಿಟ್ಲ ಜೆಸಿಐ ವತಿಯಿಂದ ಬಸವನಗುಡಿ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಣಾಮಕಾರಿ ಭಾಷಣ ಕಲೆ ಪ್ರೇರಣಾ ಐಡಿ ಟ್ರೈನಿಂಗ್ ತರಬೇತಿ ಶಿಬಿರ ನಡೆಸಲಾಯಿತು. ಈ ಕಾರ್‍ಯಕ್ರಮವನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲ್.ಎನ್ ಕೂಡೂರು ಉದ್ಘಾಟಿಸಿದರು.
ಜೆಸಿಐ ವಲಯ 15 ರ ಉಪಾಧ್ಯಕ್ಷ ರಾಯನ್ ಉದಯ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ತರಬೇತುದಾರ ಕೃಷ್ಣಮೂರ್ತಿ ಮತ್ತು ವಲಯ ತರಬೇತುದಾರ ಎಸ್.ಜಿ ಭಟ್ ತರಬೇತಿ ನಡೆಸಿಕೊಟ್ಟರು. ಜೆಸಿಐ ವಿಟ್ಲದ ಪೂರ್ವಾಧ್ಯಕ್ಷರುಗಳಾದ ಬಾಬು ಕೆ.ವಿ ಮತ್ತು ಸೋಮಶೇಖರ್, ಜೇಸಿರೆಟ್ ಅಧ್ಯಕ್ಷೆ ಮಲ್ಲಿಕಾ ಉಪಸ್ಥಿತರಿದ್ದರು.
ಮೋಹನ್ ಪ್ರಸ್ತಾವಿಸಿದರು. ಅಧ್ಯಕ್ಷ ಬಾಲಕೃಷ್ಣ ವಿಟ್ಲ ಸ್ವಾಗತಿಸಿದರು. ಕಾರ್‍ಯದರ್ಶಿ ಸಂದೀಪ್ ವಂದಿಸಿದರು. ಜೇಸನ್ ಪಿಂಟೊ ಮತ್ತು ಜೈಕಿಶನ್ ಕಾರ್‍ಯಕ್ರಮ ನಿರೂಪಿಸಿದರು. ಅಣ್ಣಪ್ಪ ಸಾಸ್ತಾನ ಸಹಕರಿಸಿದರು. 35 ಜನ ಈ ಶಿಬಿರದಲ್ಲಿ ಸದಸ್ಯರು ಭಾಗವಹಿಸಿದ್ದರು.
