Monday, January 26, 2026

ಸ್ವಯಂ ಸೇವಕ ದಿ. ಶರತ್ ಮಡಿವಾಳ ಅವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಬೇಟಿ ನೀಡಿ ಶೃದ್ದಾಂಜಲಿ ಅರ್ಪಣೆ

ಬಂಟ್ಬಾಳ : ಸ್ವಯಂಸೇವಕ ದಿ.ಶರತ್ ಮಡಿವಾಳರವರ ಬಲಿದಾನದ ದಿನವಾದ ಇಂದು ಅವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ತಾಯಿ ಭಾರತೀಯ ಸೇವೆಗೆ ಜೀವನವನ್ನೇ ಮುಡಿಪಾಗಿಟ್ಟು 7-7-2017ರಂದು ವೀರ ಹುತಾತ್ಮನಾದ ಎನ್. ಶರತ್ ಮಡಿವಾಳ ಇವರ ಬಲಿದಾನದ ಗೌರವಾಥ೯ವಾಗಿ ನಮನ ಪುಷ್ಪಾಚ೯ನೆ.
ಜುಲ್ಯೈ 8.7.2019 ಸೋಮವಾರ, ಬೆಳಿಗ್ಗೆ 9ಗಂಟೆಗೆ ಸಜೀಪಮುನ್ನೂರು
ಪಾಡಿಮನೆ, ಮಡಿವಾಳಪಡ್ಪು ಎಂಬಲ್ಲಿ ನಡೆಯಲಿದೆ.

ನಂತರ ಕಂದೂರು ಶ್ರೀಕೃಷ್ಣ ಶಿಶು ಮಂದಿರ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಶಾಂತಿನಗರ ಇದರ ವಠಾರದಲ್ಲಿ ಪುಟಾಣಿ ಮಕ್ಕಳ ಸಹಭಾಗಿತ್ವದಲ್ಲಿ ಹುತಾತ್ಮ ಶರತ್ ಸವಿ ನೆನೆಪಿಗಾಗಿ ವನಮಹೋತ್ಸವ ಕಾಯ೯ಕ್ರಮ ನಡೆಯಲಿದೆ…

ಸಹೃದಯಿ ಹಿಂದೂ ಬಂಧುಗಳು, ಶರತ್ ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮ ಸ್ವಯಂಸೇವಕನ ಗೌರವಾಥ೯ವಾಗಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸ ಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.

ಪ್ರತಿಯೊಬ್ಬ ರಾಷ್ಟ್ರಭಕ್ತ ಹಿಂದೂಗಳು ಹುತಾತ್ಮ ಶರತ್ ಮಡಿವಾಳರ ಗೌರವಾಥ೯ ತಮ್ಮ ತಮ್ಮ ಮನೆ, ಊರು, ದೇವಸ್ಥಾನ, ಮಂದಿರ ಸಂಘ ಸಂಸ್ಥೆಗಳ ವಠಾರದಲ್ಲಿ ಕೇಸರಿ ಧ್ವಜ ಪ್ರತಿಷ್ಠಾಪಿಸಿ ಪುಷ್ಪಾಚ೯ನೆ ಸಲ್ಲಿಸಿ ನಂತರ ಗಿಡಗಳನ್ನು ನೆಡುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.

ರಾಷ್ಟ್ರಸೇವಕನಾಗಿ, ರಾಷ್ಟ್ರೀಯವಾದ ಮತ್ತು ಹಿಂದುತ್ವದ ಪ್ರತಿಪಾದಕನಾಗಿ ಸಂಘದ ಶಿಸ್ತಿನ ಸ್ವಯಂಸೇವಕನಾಗಿ, ಹೆಬ್ಬಾಳದಲ್ಲಿ 1ವಷ೯ಗಳ ಕೃಷಿ ತರಬೇತಿ ಪಡೆದು ದಾರಾವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಡೆಸಿ ಎಳೆಯ ವಯಸ್ಸಿನಲ್ಲೇ ತನ್ನನ್ನು ಕೃಷಿಯಲ್ಲಿ ತೊಡಗಿಸಿಕೊಂಡು ಯುವಕರಿಗೆ ಮಾದರಿಯಾಗಬಲ್ಲ ಕೃಷಿಕನಾಗಿದ್ದ ಹುತಾತ್ಮ ಶರತ್ ಮಡಿವಾಳ .

More from the blog

ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ವೇದಿಕೆಯನ್ನು ಸುಳ್ಳು ಹರಡಲು ಬಳಸಿಕೊಂಡಿರುವುದು ಖೇದಕರ : ಸಂಸದ ಕ್ಯಾ.ಚೌಟ

ಮಂಗಳೂರು: ಸಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿ ಸುಳ್ಳಿನ ಕಾರ್ಖಾನೆಯನ್ನೇ ಸೃಷ್ಟಿಸುವ ಕಾಂಗ್ರೆಸ್‌ ಸರ್ಕಾರದ ಪ್ರಯತ್ನ ಸಂಪೂರ್ಣ ವಿಫಲಗೊಂಡಿರುವ ಕಾರಣ ಇದೀಗ ಸಚಿವ ದಿನೇಶ್‌ ಗುಂಡೂರಾವ್‌ ಅವರು ಘನವೆತ್ತ ರಾಜ್ಯಪಾಲರ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ದಕ್ಷಿಣ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...