ವಿಟ್ಲ: ಕೋಪ, ಅಹಂಕಾರ, ಗರ್ವಗಳೆಲ್ಲವೂ ಬದುಕಿಗೆ ಎಂದೂ ಪ್ರಯೋಜನಕ್ಕೆ ಬಾರವು. ಉದ್ರೇಕ ರೋಷ, ದ್ವೇಷಗಳಿಂದ ಏನೂ ಸಾಧಿಸಲಾಗದು. ಭ್ರಮೆಯಿಂದ ಹೊರಬೇಕಾದರೆ ಗುರುಶಕ್ತಿಯನ್ನು ಅರಿತುಕೊಳ್ಳುವ ಜ್ಞಾನವನ್ನು ಹೊಂದಬೇಕು. ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸುತ್ತಾ ಸಾಗೋಣ ಎಂದು ಮಾಣಿಲ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.


ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಅಂಗವಾಗಿ ೪೮ ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಪ್ರಯುಕ್ತ ಜೂ. 29ರಂದು ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಕ್ಕಳಿಗೆ ಸತ್ವಯುತ ಆಹಾರ ಕೊಡಬೇಕು ಉತ್ತಮ ಸಂಸ್ಕಾರ ಕೊಡಬೇಕು ಸಂಸ್ಕೃತಿಯ ಅರಿವು ಮೂಡಿಸಬೇಕು. ಆಚಾರ ವಿಚಾರಗಳನ್ನು ತಿಳಿಸಬೇಕು.ಗುರುವನ್ನು ಮುಂದಿಟ್ಟುಕೊಂಡು ಗುರಿಯತ್ತ ನಡೆಯಬೇಕು ಎಂದು ಮಾಣಿಲ ಶ್ರೀಗಳು ಹೇಳಿದರು.
ಉತ್ತರ ಪ್ರದೇಶದ ಸಾಧು ಸಂತರಾದ ಶ್ರೀ ಮುನಿರಾನಂದ ಸ್ವಾಮೀಜಿ, ಶ್ರೀ ಸಾಧು ಬಾಲಗಿರಿ ಸ್ವಾಮೀಜಿ ಮತ್ತಿತರರಿದ್ದರು.
ಟ್ರಸ್ಟಿ ದೇವಪ್ಪ ಕುಲಾಲ್ ಪಂಜಿಕಲ್ಲು,ಉದ್ಯಮಿ ಹರಿಯಪ್ಪ ಮಾಣಿ, ಕೃಷಿಕ ಆನಂದ ಶೆಟ್ಟಿ ತಾಳಿಪಡ್ಪು, ಚೆನ್ನಪ್ಪ ಕೋಟ್ಯಾನ್, ರೇಖಾ, ಮಹಾಲಕ್ಷ್ಮಿಯ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಟ್ರಸ್ಟಿ ಮಚ್ಚೇಂದ್ರನಾಥ ಸಾಲಿಯಾನ್, ಶ್ರೀರಾಮಮಿತ್ರ ವೃಂದದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಚ್. ಕೆ. ನಯನಾಡು ಸ್ವಾಗತಿಸಿದರು. ದೇವಪ್ಪಕುಲಾಲ್ ವಂದಿಸಿದರು.
ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕ ಸೋಮಪ್ಪ ಕೋಟ್ಯಾನ್, ವಿಠಲ ಶೆಟ್ಟಿ ಸುಣ್ಣಂಬಳ ಸಹಕರಿಸಿದರು.












