Tuesday, July 1, 2025

ವಿವಿಧ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಒತ್ತಾಯ ಎಸ್ಡಿಪಿಐ ಮಂಚಿ ವಲಯ ಸಮಿತಿ ವತಿಯಿಂದ ಮನವಿ

ಬಂಟ್ವಾಳ: ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಮಂಚಿ ವಲಯ ಸಮಿತಿ ವತಿಯಿಂದ ಶುಕ್ರವಾರ ಪಂಚಾಯತ್ ಅಭಿವೃದ್ಧಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹೆಗಡೆ ರಸ್ತೆ ದುರಸ್ತಿ, ಕುಕ್ಕಾಜೆ ಜಂಕ್ಷನ್‌ನಲ್ಲಿ ಹೊಸ ಶೌಚಾಲಯ ನಿರ್ಮಾಣ, ಚೆಕ್‌ಪೋಸ್ಟ್ ಬಳಿ ಹೈಮಾಸ್ಕ್ ಸೋಲಾರ್ ಅಳವಡಿಕೆ ಹಾಗೂ ಕೆಟ್ಟುಹೋದ ದಾರಿ ದೀಪಗಳನ್ನು ಸರಿಪಡಿಸುವಂತೆ ಮನವಿ ಮೂಲಕ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮಂಚಿ ಹೋರಾಟ ಸಮಿತಿ ಅಧ್ಯಕ್ಷ ನವಾಜ್ ಕೋಡಿಬೈಲ್, ಎಸ್ಡಿಪಿಐ ಮಂಚಿ ವಲಯ ಸಮಿತಿ ಅಧ್ಯಕ್ಷ ಫೈಝಲ್ ಮಂಚಿ, ಕಾರ್ಯದರ್ಶಿ ಜಬ್ಬಾರ್ ಮಂಚಿ, ಸಮಾಜಿಕ ಕಾರ್ಯಕರ್ತ ಕುಕ್ಕಾಜೆ ಮೋನು, ಸುಫೈದ್ ಕುಕ್ಕಾಜೆ, ಶರೀಫ್ ಕುಕ್ಕಾಜೆ, ಹಾರೂನ್ ಕುಕ್ಕಾಜೆ, ಡಿ.ಎನ್. ಫಾರೂಕ್ ಮಂಚಿ ಹಾಜರಿದ್ದರು.

More from the blog

ಕರಾವಳಿ ಮರಳು ನೀತಿ ರೂಪಿಸಲು ಒತ್ತಾಯಿಸಿ AICCTU ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಷೇಧ ಮಾಡಿರುವುದನ್ನು ಪ್ರಗತಿಪರ ದ.ಕ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ...

ನೆತ್ತರಕೆರೆ: ನವೋದಯ ಮಿತ್ರ ಕಲಾ ವೃಂದ (ರಿ) ನೂತನ ಅಧ್ಯಕ್ಷರಾಗಿ ಜಗದೀಶ್ ಎನ್ ಆಯ್ಕೆ..

ಬಂಟ್ವಾಳ : ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ನವೋದಯ ಮಿತ್ರ ಕಲಾ ವೃಂದ (ರಿ) ನೆತ್ತರಕೆರೆ ಇದರ ವಾರ್ಷಿಕ ಮಹಾಸಭೆಯು ಜೂ 29ರಂದು ಸಂಘದ ಸಭಾಭವನದಲ್ಲಿ ನಡೆದು...

ಕೊಲೆಯತ್ನ ಪ್ರಕರಣ : 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..

ಬಂಟ್ವಾಳ : ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಟ್ವಾಳದ ಬಿ ಮೂಡ ಗ್ರಾಮ ನಿವಾಸಿ ಅಕ್ಬರ್ ಸಿದ್ದಿಕ್ ಬಂಧಿತ ಆರೋಪಿ. 2011ನೇ ಸಾಲಿನಲ್ಲಿ ಬಂಟ್ವಾಳ ತುಂಬೆ ಗ್ರಾಮದ ಅರ್ಬನಗುಡ್ಡೆ ಎಂಬಲ್ಲಿ...

‘ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು’- ಒಡಿಯೂರು ಶ್ರೀ

ವಿಟ್ಲ: ಕೃಷಿ ಎಂಬುದು ಶ್ರೇಷ್ಠವಾಗಿದ್ದು, ಹೃದಯಕ್ಕೂ, ಭೂಮಿಯಲ್ಲಿಯೂ ಕೃಷಿ ನಡೆಯಬೇಕು. ಪ್ರತಿಯೊಂದಕ್ಕೂ ಸಂಸ್ಕಾರ ನೀಡುವ ಕಾರ್ಯವಾದಾಗ ಸುಸೂತ್ರವಾಗಿ ನಡೆಯುತ್ತದೆ. ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು. ಆಧ್ಯಾತ್ಮದ ಜಾಗೃತಿಯಿಂದ ಬದುಕು ಸುಂದರವಾಗುತ್ತದೆ. ಕಲೆ,...