ಬಂಟ್ವಾಳ: ಬಂಟ್ವಾಳ ನಗರ ಪೊಲೀಸರು ಬಿಸಿರೋಡಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸ್ಕೂಟರೊಂದನ್ನು ತಡೆದು ವಿಚಾರಿಸಿದಾಗ ಅದು ಮೆಲ್ಕಾರಿನಿಂದ ಕಳವು ಮಾಡಿದ ಸ್ಕೂಟರ್ ಎಂದು ತಿಳಿದುಬಂದಿದ್ದು, ಆರೋಪಿ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.

ನಾವೂರು ಗ್ರಾಮದ ಅಬೂಬಕ್ಕರ್ ಸಿದ್ದೀಕ್ ಬಂಧಿತ ಆರೋಪಿಯಾಗಿ ದ್ದಾನೆ. ಬಂಟ್ವಾಳ ನಗರ ಠಾಣಾ ಪಿಎಸ್‌ಐ ದುರ್ಗಪ್ಪ ನೇತೃತ್ವದ ಪೊಲೀಸರ ತಂಡ ಬಿ.ಸಿ. ರೋಡಿನ ಫೈಓವರ್ ತಳಭಾಗದಲ್ಲಿ ವಾಹನಗ ಳನ್ನು ತಪಾಸಣೆ ನಡೆಸುತ್ತಿದ್ದು ಈವೇಳೆ ಸರ್ಕಲ್ ಭಾಗದಿಂದ ಸ್ಕೂಟರೊಂದು ಆಗಮಿಸಿದೆ. ಅದನ್ನು ತಡೆದು ಸವಾರನನ್ನು ವಿಚಾರಿಸಿದಾಗ ಆತ ಸಮರ್ಪಕ ಉತ್ತರ ನೀಡಲಿಲ್ಲ. ಬಳಿಕ ಈ ಕುರಿತು ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ಅದೇ ಸ್ಕೂಟರ್ ಕಳವಾಗಿರುವ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದನ್ನು ಮೆಲ್ಕಾರಿನಿಂದ ಕಳವು ಮಾಡಿರುವುದಾಗಿ ಆರೋಪಿ ಸವಾರ ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ
