ವಿಟ್ಲ: ಬಸವನಗುಡಿ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ನಡೆದ ಶಾಲಾ ಆರಂಭೋತ್ಸವ ಕಾರ್‍ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಎಲ್.ಎನ್ ಕೂಡೂರು ಉದ್ಘಾಟಿಸಿದರು. ಕಾರ್‍ಯದರ್ಶಿ ಶ್ರೀಧರ ಕೊಡೆಕ್ಕಲ್, ಆಡಳಿತಾಧಿಕಾರಿ ಮೋನಪ್ಪ ಶೆಟ್ಟಿ, ಸದಸ್ಯರುಗಳಾದ ಶ್ರೀಪ್ರಕಾಶ್ ಕುಕ್ಕಿಲ ಮತ್ತು ಬಾಬು ಕೆ ವಿ, ನಿಯೋಜಿತ ಆಡಳಿತಾಧಿಕಾರಿ ರಾಧಾಕೃಷ್ಣ ಕೆ, ಪ್ರಿನ್ಸಿಪಾಲ್ ಜಯರಾಮ ರೈ, ಶಿಕ್ಷಕ ಶಿಕ್ಷಕಿಯರು, ಮಕ್ಕಳು ಮತ್ತು ಹೆತ್ತವರು ಉಪಸ್ಥಿತರಿದ್ದರು.


ಚಂದಳಿಕೆಸ್ಕೂಲ್:
ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಆರಂಭೋತ್ಸವದಲ್ಲಿ ಮಕ್ಕಳನ್ನು ಜನಪದ ನೃತ್ಯಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯವರು, ಚಂದಳಿಕೆವಿದ್ಯಾವರ್ಧಕ ಸಂಘದವರು, ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.