ಬಂಟ್ವಾಳ: ಶಾಲಾ ಪ್ರಾರಂಭದ ಬಗ್ಗೆ ಪರವಿರೋಧಗಳು, ಚರ್ಚೆಗಳು ನಡೆಯುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ| ಪ್ರಭಾಕರ್ ಭಟ್ ಅವರು ಈ ವರ್ಷ ಶಾಲೆ ಪ್ರಾರಂಭಿಸುವುದು ಬೇಡ ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕೋವಿಡ್ -19ನ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆ ಪ್ರಾರಂಭ ಮಾಡುವುದು ಸಮಂಜಸವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮುಂದಿನ ವರ್ಷವೇ ಶಾಲೆ ಪ್ರಾರಂಭಿಸಿ ಎಂದು ಅವರು ಹೇಳಿದ್ದಾರೆ.
ಇದರ ಜೊತೆಯಲ್ಲಿ ಸ್ಕೂಲ್ ಫೀಸ್ ನೆಪದಲ್ಲಿ ಶಾಲಾ ಮತ್ತು ಕಾಲೇಜುಗಳಿಂದ ಸುಲಿಗೆ ಅಮಾನವೀಯ ಎಂದು ಅವರು ಹೇಳಿದ್ದಾರೆ.


ಶಾಲೆಯಲ್ಲಿ ಪೋಷಕರ ಸಭೆ
ಶಾಲಾ ಪ್ರಾರಂಭದ ಬಗ್ಗೆ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ಪೋಷಕರ ವಿಶೇಷ ಸಭೆ ಕರೆದಿದ್ದು, ಅದರಲ್ಲಿ ಈ ವರ್ಷ ಶಾಲೆ ಪ್ರಾರಂಭ ಬೇಡವೇ ಬೇಡ ಎಂಬ ಚರ್ಚೆ ಕೂಡಾ ಬಂದಿತ್ತು.

