Tuesday, January 27, 2026

ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷ ಧ್ರುವ – ಯಕ್ಷ ಶಿಕ್ಷಣ ಉದ್ಘಾಟನಾ ಕಾರ್ಯಕ್ರಮ..

ಬಂಟ್ವಾಳ : ಅವಕಾಶವಂಚಿತ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಕಲಾ ನೈಪುಣ್ಯತೆಯನ್ನು ಬೆಳಗಿಸಿ ಸಂಸ್ಕಾರ ಬದ್ಧ ಬುನಾದಿಯನ್ನು ಹಾಕಿಕೊಡುವ ವಿಶಿಷ್ಟ ಯೋಜನೆ ಯಕ್ಷದ್ರುವ – ಯಕ್ಷ ಶಿಕ್ಷಣವು ಯಕ್ಷ ಧ್ರುವ ಪಟ್ಲ ಫೌಂಡೇಶನ್ (ರಿ) ಇದರ ಕನಸಾಗಿದೆ. ಮೂರನೇ ಶೈಕ್ಷಣಿಕ ಸಾಲಿಗೆ ಪಾದಾರ್ಪಣೆ ಮಾಡುತ್ತಿರುವ ಯಕ್ಷ ಶಿಕ್ಷಣ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಜು. 01 ರಂದು ಹಮ್ಮಿಕೊಳ್ಳಲಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಮೂಲಕ ಯಕ್ಷದ್ರುವ ಯಕ್ಷ ಶಿಕ್ಷಣಕ್ಕೆ ಚಾಲನೆ ನೀಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕದ ಅಧ್ಯಕ್ಷರು, ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮಾತನಾಡಿ, “ಯಾವುದೇ ಕಲೆಗಳನ್ನು ಒಲಿಸಿಕೊಳ್ಳಲು ಅದಕ್ಕೆ ಋಣಾನುಬಂಧ ಬೇಕು. ಕಷ್ಟದ ದಿನಗಳಲ್ಲೂ ಕೂಡ ಯಕ್ಷಗಾನದ ಒಲವಿಗೆ ಶರಣಾಗಿ ಮೇಲೆದ್ದ ಅನೇಕ ಕಲಾವಿದರ ಸಾಲಿಗೆ ಕೊರತೆಯಾಗದಂತೆ ಈ ಕಾಲಘಟ್ಟವು ವಿನೂತನ ಪ್ರಯೋಗದ ಮೂಲಕ ಯಕ್ಷಗಾನದ ಪ್ರತಿಭೆಗಳನ್ನು ಬೆಳೆಸುತ್ತಿದೆ. ಪಟ್ಲ ಫೌಂಡೇಶನ್ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ.” ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ ಮಾತನಾಡಿ, “ಯಕ್ಷ ಪ್ರತಿಭೆಗಳಿಗೆ ಪಟ್ಲ ಫೌಂಡೇಶನ್ ಎನ್ನುವುದು ಒಂದು ಆಶಾಕಿರಣವಾಗಿದೆ. ತಳಮಟ್ಟದಿಂದ ತುತ್ತ ತುದಿಯವರೆಗೆ ಯಕ್ಷಗಾನದ ರಂಗನ್ನು ಬಯಲು ಗೊಳಿಸಿದ ಹಿರಿಮೆ ಪಟ್ಲ ತಂಡಕ್ಕೆ ಸಲ್ಲುತ್ತದೆ. ನಮ್ಮ ಸೀಮೆಯ ಗಂಡು ಕಲೆ ಯಕ್ಷಗಾನವನ್ನು ಮನೆ ಮನೆಗೂ ಬಿತ್ತರಿಸಿ ಆ ಮೂಲಕ ಸಾಮೂಹಿಕ ಯಕ್ಷ ಪ್ರತಿಭೆಗಳನ್ನು ಹುಟ್ಟು ಹಾಕುವ ವಿನೂತನ ಕಾರ್ಯ ಯೋಜನೆ ವಿಶಿಷ್ಟವಾಗಿದೆ. ನಗರ ಗ್ರಾಮ್ಯವೆನ್ನದೆ ಶಾಲಾ ವಿದ್ಯಾರ್ಥಿಗಳನ್ನು ಯಕ್ಷದ್ರುವ ಯಕ್ಷ ಶಿಕ್ಷಣದ ಮೂಲಕ ಯಕ್ಷರಂಗಕ್ಕೆ ಪ್ರವೇಶಗೊಳಿಸುವ ಪಟ್ಲಾ ಫೌಂಡೇಶನ್ ಕಾರ್ಯ ಸಾಧನೆ ಪ್ರಶಂಸಾರ್ಹ” ಎಂದರು.

ಯಕ್ಷಗಾನ ಗುರುಗಳಾಗಿ ಕಟೀಲು ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಅಶ್ವತ್ ಮಂಜನಾಡಿ ಮಾತನಾಡಿ, “ಎಲ್ಲಾ ಪ್ರಬುದ್ಧ ಯಕ್ಷಗಾನ ಕಲಾವಿದರ ಸಂಪನ್ಮೂಲ ಕ್ರೋಢೀಕರಿಸಿ ಈ ಬಾರಿ ಸಿದ್ಧವಾಗಿರುವ ಯಕ್ಷಗಾನ ಪುಸ್ತಕವು ಭವಿಷ್ಯದ ಪ್ರತಿಭೆಗಳನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನ ಸಫಲವಾಗಲಿದೆ. ಪ್ರತಿಯೊಂದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಯಕ್ಷಗಾನ ಒಂದು ಉತ್ತಮ ಮಾಧ್ಯಮವಾಗಿದ್ದು ಬಹಳಷ್ಟು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಲ ಭಾಗವತರ ಕನಸನ್ನು ಈಡೇರಿಸುವಲ್ಲಿ ಪ್ರತಿಯೊಬ್ಬ ಗುರುಗಳು ಪ್ರಯತ್ನಿಸುತ್ತಿದ್ದಾರೆ.” ಎಂದರು. ನಂತರ ಯಕ್ಷ ಶಿಕ್ಷಣಕ್ಕೆ ದಾಖಲಾತಿ ಹೊಂದಿದ 60 ವಿದ್ಯಾರ್ಥಿಗಳಿಗೆ ಸಾಂಕೇತಿಕ ನಾಟ್ಯ ಬೋಧನೆ ಮಾಡಿದರು.

ಈ ಸಂದರ್ಭದಲ್ಲಿ ಮಂಚಿ ಕೊಳ್ನಾಡು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಯುಕ್ಷಗಾನ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಕಾರ್ತಿಕ್ ಕುಲಾಲ್ ಮಂಚಿ ಹಾಗೂ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಯಕ್ಷ ಪ್ರತಿಭೆ ಕುಮಾರಿ ದಿವ್ಯಶ್ರೀ ಇವರನ್ನು ಗೌರವದಿಂದ ಅಭಿನಂದಿಸಲಾಯಿತು.

ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕ ಗೌರವ ಮಾರ್ಗದರ್ಶಕರು, ಶ್ರೀ ದೇವಪ್ಪ ಶೇಖ ಪೀಲ್ಯಡ್ಕ , ಪ್ರಧಾನ ಸಂಚಾಲಕರು ಶ್ರೀ ಅರವಿಂದ ರೈ ಮೂರ್ಜೆಬೆಟ್ಟು, ಸಂಘಟನಾ ಕಾರ್ಯದರ್ಶಿ ಶ್ರೀ ಪದ್ಮನಾಭ ಕುಡ್ತಮುಗೇರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಜಯಂತ ಕುಕ್ಕಾಜೆ, ಶಿಕ್ಷಕ ವೃಂದದ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲ ವಿಟ್ಲ ವಂದಿಸಿದರು, ಕಲಾವಿದ ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...