ಬಂಟ್ವಾಳ: ಕೊಡಂಗೆ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಕೊಡಂಗೆ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ಹಾಗೂ ಕೊಡಂಗೆ ಎಸ್‌ಡಿಎಂಸಿ, ಪರ್ಲಿಯಾ ಎಜುಕೇಶನ್ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಕೊಡಂಗೆ ಶಾಲಾ ವಾರ್ಷಿಕೋತ್ಸವ ಶನಿವಾರ ನಡೆಯಿತು.
ಪರ್ಲಿಯಾ ಎಜುಕೇಶನ್ ಟ್ರಸ್ಟ್‌ನ ಸಂಚಾಲಕ ಸತ್ತಾರ್ ಶಾಲಾ ಧ್ವಜಾರೋಹಣ ನೆರವೇರಿಸಿದರು. ಪುರಸಭಾ ಸದಸ್ಯ ಮುಹಮ್ಮದ್ ನಂದರಬೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಯಮಿ ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವೇದಿಕೆಯಲ್ಲಿ ಪುರಸಭಾ ಸದಸ್ಯ ಲುಕ್ಮಾನ್, ಸಿಆರ್‌ಪಿ ಉಷಾ ಸುವರ್ಣ, ಮುಹಮ್ಮದ್ ಡಿ., ಪಿ.ಎ. ರಹೀಂ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಎಂ. ಇಸ್ಮಾಯಿಲ್, ಮುಖ್ಯೋಪಾಧ್ಯಾಯಿನಿ ಸೋನಿತ ಕೆ., ಟ್ರಸ್ಟ್ನ ಗೌರವಾಧ್ಯಕ್ಷ ಹಂಝ ಪರ್ಲಿಯಾ, ನೇತಾಜಿ ಸುಭಾಶ್ಚಂದ್ರ ಶಾಲೆಯ ಮುಖ್ಯೋಪಾಧಾಯಿನಿ ಉಮಾವತಿ, ಕಾರ್ಯಾಧ್ಯಕ್ಷ ಸುರೇಶ್, ವಿದ್ಯಾರ್ಥಿನಾಯಕಿ ಫಾತಿಮ ಸಫ, ನಾಯಕ ಮುಹಮ್ಮದ್ ಅಝೀಂ ಹಾಜರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕಿ ಶಶಿಕಲಾ ಕೆ.ಎನ್. ಸ್ವಾಗತಿಸಿ, ಮುಖ್ಯ ಶಿಕ್ಷಕಿ ರಮಣಿ ಮೋಹನ್ ವಂದಿಸಿದರು. ಅಶ್ರಫ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

