ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಒಂದನೇ ತರಗತಿ ಹಾಗೂ ಎಂಟನೇ ತರಗತಿಯ ೨೫ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗುಗಳನ್ನು ಚಂದಳಿಕೆಯ ಕಾರ್ತಿಕ್ ಫ್ರೆಂಡ್ಸ್‌ನ ಸ್ಥಾಪಕ ಅಧ್ಯಕ್ಷ ಪುತ್ತೂರು ನೆಹರೂ ನಗರದ ಚೈತ್ರಾ ಫ್ಯಾನ್ಸಿ ಸ್ಟೋರ್‍ಸ್‌ನ ಮಾಲಕ ಗಣೇಶ ಸಿ. ಚಂದಳಿಕೆ ಇವರು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ, ವಿದ್ಯಾವರ್ಧಕ ಸಂಘದ ದೇಜಪ್ಪ ನಿಡ್ಯ, ನೋಣಯ್ಯ ಪೂಜಾರಿ, ಶ್ರೀನಿವಾಸ ಚಂದಳಿಕೆ, ಎಸ್‌ಡಿಎಂಸಿ ಉಪಾಧ್ಯಕ್ಷ ವಾಸುದೇವ ಕೆ, ಆರ್.ಕೆ ಆರ್ಟ್ಸ್‌ನ ರಾಜೇಶ್ ವಿಟ್ಲ, ಮುಖ್ಯ ಶಿಕ್ಷಕ ವಿಶ್ವನಾಥ ಗೌಡ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
