ಬಂಟ್ವಾಳ: ಕೊರೊನಾ ನಿಯಮಾವಳಿಯಂತೆ ಶಾಲೆಯು ನಿಯಮಿತವಾಗಿ ನಡೆಯುತ್ತಿದೆಯೆಂದು ಪರೀಕ್ಷಿಸಲು ಲೋಕಾಯುಕ್ತ ಅಧೀಕ್ಷಕ ಕುಮಾರಸ್ವಾಮಿ ಮತ್ತು ಅವರ ತಂಡ ಬಂಟ್ವಾಳ ತಾಲೂಕಿನ ಪೊಳಲಿ, ಕಳ್ಳಿಗೆ ಕೊಡ್ಮಾಣ್ ಹಾಗೂ ಸುಜೀರ್ ಸರಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿದರು.


ಪೊಳಲಿ ಶಾಲೆಯಲ್ಲಿ ಕೊರೋನಾದ ಸೂಚನಾ ನಿಯಮಾವಳಿಗಳನ್ನು ಶಿಸ್ತಿನಿಂದ ಪಾಲಿಸಿದನ್ನು ಪ್ರಶಂಶಿಸಿದರು ಹಾಗೆಯೇ ಅಲ್ಲಲ್ಲಿ ಪ್ರದರ್ಶಿಸಿದ ಕೋರೋಣ ಜಾಗೃತಿ ಭಿತ್ತಿಪತ್ರವನ್ನು ಶೌಚಾಲಯ ಸ್ವಚ್ಛತೆ ಮತ್ತು ವಿದ್ಯಾರ್ಥಿಗಳ ಶಿಸ್ತು ಹಾಗೂ ಶಿಕ್ಷಕರ ಕಾರ್ಯವೈಖರಿಯನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಚೆಲುವರಾಜು, ಲೋಕಾಯುಕ್ತ ನಿರೀಕ್ಷಕರಾದ ಅಮನುಲ್ಲಾ, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುಕುಮಾರ್ ಕಾಡಿನ ಕೊಂಡ ಉಪಸ್ಥಿತರಿದ್ದರು.
ಈ ಶಾಲೆಯು ಇನ್ನಿತರ ಖಾಸಗಿ ಶಾಲೆಯಂತೆ ಕಾರ್ಯನಿರ್ವಹಿಸುತ್ತಿರುವುದನ್ನು ಮತ್ತು ವಿದ್ಯಾರ್ಥಿಗಳ ದಾಖಲಾತಿಯನ್ನು ನೋಡಿ ಲೋಕಾಯುಕ್ತ ಅಧೀಕ್ಷಕರಾದ ಕುಮಾರಸ್ವಾಮಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಇದನ್ನು ಮುಂದುವರಿಸುವಂತೆ ಶಿಕ್ಷಕರಿಗೆ ಪ್ರೇರಣೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು

