ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು.

ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು ಉದ್ಘಾಟಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ ಮೂಡಂಬೈಲು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಪ್ರಕಾಶ್ ವಿಟ್ಲ, ಸಿಆರ್ ಪಿ ಬಿಂದು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ, ದೈಹಿಕ ಶಿಕ್ಷಕ ವಿದ್ಯಾಶಂಕರ್, ನಿವೃತ್ತ ಮುಖ್ಯ ಶಿಕ್ಷಕಿ ಪುಷ್ಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಸ್ಮಿತಾ ಸ್ವಾಗತಿಸಿದರು. ಶಿಕ್ಷಕಿ ಶೋಭಾ ಪ್ರಸ್ತಾವಿಸಿದರು. ಶಿಕಕ್ಷಿ ತನುಶ್ರೀ ವಂದಿಸಿದರು. ಶಿಕ್ಷಕಿ ವಾರಿಜಾ ನಿರೂಪಿಸಿದರು.
ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹೆತ್ತವರ ಸಹಕಾರದಲ್ಲಿ ತರಕಾರಿ ಕಾಯಿಪಲ್ಲೆ ತಿಂಡಿ ತಿನಿಸು, ಜ್ಯೂಸ್ ಮಳಿಗೆ, ಲಕ್ಕಿ ಗೇಮ್ಸ್, ಮೆಹಂದಿ ಯುನಿಟ್ ಇನ್ನಿತರ ವಿವಿಧ ಬಗೆಬಗೆಯ ವ್ಯಾಪಾರ ಮಳಿಗೆಗಳನ್ನು ಹಾಕಿ ವ್ಯವಹಾರ ವಹಿವಾಟು ಮಾಡುವ ಅನುಭವ ಪಡೆದರು.