ವಿಟ್ಲ: ಕೇಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಉಳ್ಳಾಲ್ತಿ ವಿದ್ಯಾವರ್ಧಕ ಸಂಘ ಕೇಪು ಇದರ ವತಿಯಿಂದ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್‍ಯಕ್ರಮ ಶ್ರೀ ಉಳ್ಳಾಲ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಪಡಿಬಾಗಿಲು ಅಧ್ಯಕ್ಷತೆಯಲ್ಲಿ ನಡೆಯಿತು.
ಉಚಿತವಾಗಿ ಸಮವಸ್ತ್ರವನ್ನು ಒದಗಿಸಿದ ಪುತ್ತೂರು ಆರ್‌ಹೆಚ್ ಸೆಂಟರ್ ಕೊಡುಗೆಯಾಗಿ ನೀಡಿದ್ದರು. ಈ ಸಂದರ್ಭದಲ್ಲಿ ಶ್ರೀ ಉಳ್ಳಾಲ್ತಿ ವಿದ್ಯಾವರ್ಧಕ ಸಂಘದ ಕಾರ್‍ಯಾಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಹಿರಿಯರಾದ ದೇವದಾಸ ರೈ ಕೇಪುಗುತ್ತು, ಶಾಲಾ ಹಳೆ ವಿದ್ಯಾರ್ಥಿ ವಿಷ್ಣು ಶರ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರವಿ ಗೌಡ ಕೊರತಿಗದ್ದೆ ಹಾಗೂ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮೋಹಿನಿ ಕೇಪು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸರೋಜ ಸ್ವಾಗತಿಸಿದರು. ಶ್ರೀಉಳ್ಳಾಲ್ತಿ ವಿದ್ಯಾವರ್ಧಕ ಸಂಘದ ಕಾರ್‍ಯದರ್ಶಿ ಉಮೇಶ ಗೌಡ ವಂದಿಸಿದರು. ಶಾಲಾ ಸಹ ಶಿಕ್ಷಕಿ ಚಿನ್ನಮ್ಮ ಕಾರ್‍ಯಕ್ರಮ ನಿರೂಪಿಸಿದರು.

