ದೆಹಲಿ: ಸೌದಿ ಅರೇಬಿಯಾದಲ್ಲಿನ ಜಿದ್ದಾ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ಹಿಂದು ವ್ಯಕ್ತಿಯೊಬ್ಬರ ಮೃತದೇಹವನ್ನು ಇಸ್ಲಾಮ್ ಸಂಪ್ರದಾಯದತೆ ದಫನ ಮಾಡಿದ್ದು ಇದೀಗ ಮೃತದೇಹದ ಅವಶೇಷಗಳನ್ನು ಹೊರ ತೆಗೆದು ಭಾರತಕ್ಕೆ ತರುವಂತೆ ದಿಲ್ಲಿ ಹೈಕೋರ್ಟ್ ಭಾರತ ಸರಕಾರಕ್ಕೆ ಸೂಚಿಸಿದೆ.

ಸೌದಿ ಅರೇಬಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅನಿವಾಸಿ ಭಾರತೀಯ ಸಂಜೀವ್ ಕುಮಾರ್ ಜನವರಿ 24ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿತ್ತು. ಆದರೆ ಅಚ್ಚರಿಯೆಂಬತೆ ಫೆಬ್ರವರಿ 18ರಂದು ಮೃತದೇಹವನ್ನು ಇಸ್ಲಾಮ್ ಸಂಪ್ರದಾಯದAತೆ ದಫನ ಮಾಡಲಾಗಿತ್ತು. ಇದಕ್ಕೆ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಮಾಡಿದ ಎಡವಟ್ಟು ಕಾರಣವಾಗಿದೆ.
ರಾಯಭಾರ ಕಚೇರಿ ಸಿಬ್ಬಂದಿ ಮೃತರ ಮರಣ ದಾಖಲೆ ಪತ್ರದ ಧರ್ಮ ಕಾಲಂನಲ್ಲಿ ಮುಸ್ಲಿಮ್ ಎಂದು ತಪ್ಪಾಗಿ ಉಲ್ಲೇಖಿಸಿದ್ದರಿಂದಾಗಿ ಮೃತದೇಹವನ್ನು ಸೌದಿಯಲ್ಲೇ ಇಸ್ಲಾಮ್ ಸಂಪ್ರದಾಯದತೆ ದಫನ ನಡೆಸಲಾಗಿತ್ತು. ಈ ಬಗ್ಗೆ ಮೃತರ ಪತ್ನಿ ಅಂಜು ಶರ್ಮಾ ಅವರಿಗೆ ರಾಯಭಾರ ಕಚೇರಿಯಿಂದ ತಮ್ಮ ಪ್ರಮಾದಕ್ಕಾಗಿ ಕ್ಷಮಾಪಣಾ ಪತ್ರವನ್ನೂ ಕಳುಹಿಸಲಾಗಿದೆ. .
ಆದರೆ ಮೃತರ ಪತ್ನಿ ಅಂಜು ಶರ್ಮಾ ಪತಿಯ ಮೃತದೇಹಕ್ಕಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ನಾನಾಗಲಿ ಅಥವಾ ನನ್ನ ಕುಟುಂಬದವರಾಗಲಿ ಮೃತದೇಹದ ಅಂತಿಮ ಸಂಸ್ಕಾರ ನಡೆಸಲು ಅನುಮತಿ ಪತ್ರ ನೀಡಿರಲಿಲ್ಲ. ಹೀಗಿರುವಾಗ ಸೌದಿಯಲ್ಲಿನ ಸ್ಥಳೀಯ ಪ್ರಾಧಿಕಾರಕ್ಕೆ ಮೃತದೇಹದ ಅವಶೇಷಗಳನ್ನು ಹೊರ ತೆಗೆದು ಅದನ್ನು ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ಅರ್ಜಿಯಲ್ಲಿ ಕೋರಿದ್ದರು.
ಅರ್ಜಿ ಆಲಿಸಿದ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ವಿವರಣೆ ಕೇಳಿತ್ತು. ಹೈಕೋರ್ಟಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ, ಸೌದಿ ಸ್ಥಳೀಯ ಆಡಳಿತ ಸಂಜೀವ್ ಕುಮಾರ್ ಅವರ ಮೃತದೇಹ ದಫನಗೈದ ಸ್ಥಳವನ್ನು ಪತ್ತೆ ಹಚ್ಚಿದೆ ಎಂದು ಕೋರ್ಟಿಗೆ ತಿಳಿಸಿದೆ. ಮಾತ್ರವಲ್ಲದೆ ಜಿದ್ದಾದ ಭಾರತೀಯ ರಾಯಭಾರ ಕಚೇರಿಯು ಮೃತದೇಹದ ಅವಶೇಷಗಳನ್ನು ಹೊರತೆಗೆದು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು ಅಲ್ಲಿನ ನ್ಯಾಯಾಲಯದಲ್ಲಿ ನಡೆಸುತ್ತಿದೆ ಎಂದು ತಿಳಿಸಿದೆ.
