ಬಂಟ್ವಾಳ: ಬಂಟ್ವಾಳ ತಾಲೂಕು ಕೂರ್ಯಾಳ ಗ್ರಾಮದ ಮೇಗಿನ ಕೂರ್ಯಾಳದಲ್ಲಿ ಪುನರ್ನಿರ್ಮಾಣಗೊಳ್ಳಲಿರುವ ಬೊಳ್ಳಿ ಬೊಟ್ಟು ದೈವಸಾನ್ನಿಧ್ಯದಲ್ಲಿ ಗಣ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಆಶ್ಲೇಷ ಪೂಜೆ ಜರಗಿತು.
ನಿವೃತ್ತ ಮುಖ್ಯ ಶಿಕ್ಷಕ, ಸಮಿತಿ ಗೌರವಾಧ್ಯಕ್ಷ, ವೇದಾನಂದ ಕಾರಂತ ಅವರು ದೈವಸ್ಥಾನ ಪುನರ್ನಿರ್ಮಾಣ ಪ್ರಯುಕ್ತ ಮುಂದೆ ಅಷ್ಟಮಂಗಳ ಪ್ರಶ್ನೆ, ದೈವಸಾನಿಧ್ಯ ಹಾಗೂ ಜೀರ್ಣೋದ್ಧಾರದಂತಹ ಪುಣ್ಯ ಕಾರ್ಯಗಳು ನೇರವೇರಲಿದ್ದು, ಆ ಪ್ರಯುಕ್ತ ಭಕ್ತಾದಿಗಳು ತನು, ಮನ, ಧನ ಸಹಕಾರ ನೀಡಬೇಕೆಂದು ವಿನಂತಿಸಿದರು.
ಅಧ್ಯಕ್ಷ ಗಣೇಶ ಆಚಾರ್ಯ, ಕೋಶಾಧಿಕಾರಿ ಪುರಂದರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
