ಬಂಟ್ವಾಳ: ಬಂಟ್ವಾಳ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಕವಿ ಸರ್ವಜ್ಞ ಜಯಂತಿ ಆಚರಣೆಯನ್ನು ತಾಲೂಕು ಮಟ್ಟದ ಆಚರಣಾ ಸಮಿತಿ ವತಿಯಿಂದ ಇಂದು ಶನಿವಾರ ಮಾಡಲಾಯಿತು.



ಈ ಸಂದರ್ಭ ಮಾತನಾಡಿದ ಉಪತಹಸೀಲ್ದಾರ್ ರಾಜೇಶ್ ನಾಯ್ಕ್ ಸರ್ವಜ್ಞ ತನ್ನ ಹಿತನುಡಿಗಳಿಂದ ಸಮಾಜವನ್ನು ಒಳ್ಳೆಯ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಇವರ ತ್ರಿಪದಿಗಳಲ್ಲಿರುವ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ಆಡು ಮಾತಿನಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು ಸರ್ವಜ್ಞ. ಅವಿದ್ಯಾವಂತರಾದದರೂ ಎಲ್ಲ ಜನರನ್ನೂ ಒಂದೇ ದೃಷ್ಟಿಯಿಂದ ನೋಡಿ ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದರು ಎಂದು ರಾಜ್ಯ ಕುಲಾಲ ಕುಂಬಾರರ ಮಹಿಳಾ ಸಂಘದ ಅಧ್ಯಕ್ಷರಾದ ಭಾರತಿ ಸೇಸಪ್ಪ ಹೇಳಿದರರು.
ಈ ಸಂದರ್ಭದಲ್ಲಿ ಹರಿಪ್ರಸಾದ್ ಪುರಸಭೆ ಸದಸ್ಯರು,
ಮತಿ ಶೋಭಾ ಹರಿಶ್ಚಂದ್ರ ಪುರಸಭೆ ಸದಸ್ಯರು, ಸುಂದರ್ .ಬಿ ಅಧ್ಯಕ್ಷರು ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಪದ್ಮನಾಭ ವಿಟ್ಲ ಉಪಾಧ್ಯಕ್ಷರು ಸಮಾಜ ಸೇವಾ ಸಹಕಾರಿ ಬ್ಯಾಂಕ್, ಸುಕುಮಾರ್ ಬಂಟ್ವಾಳ ಗೌರವ ಅಧ್ಯಕ್ಷರು,
ಪುನೀತ್ ಎಸ್ ಮೈರಾನ್ ಪಾದೆ ಹಾಗೂ ಕುಲಾಲ ಸಂಘದ ಪ್ರಮುಖರು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವಿಷಯ ನಿರ್ವಾಹಕ ವಿಶು ಕುಮಾರ್
ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ಜನಾರ್ದನ ಬಂಟ್ವಾಳ್ ಸ್ವಾಗತಿಸಿ
ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ ವಂದಿಸಿದರು.












