ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ವರ್ಷಾವಽ ಜಾತ್ರೆ ಮತ್ತು ಉತ್ಸವಾದಿಗಳು ಮಾ.18 ರಿಂದ ಮಾ.22ರವರೆಗೆ ವರ್ಕಾಡಿ ದಿನೇಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ವೈದಿಕ-ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರಗಲಿರುವುದು.
ಮಾ.18 ರಂದು ಬೆಳಗ್ಗೆ ಗಣಹೋಮ, ಪ್ರಾರ್ಥನೆ, ತೋರಣ ಮುಹೂರ್ತ, ಮಧ್ಯಾಹ್ನ ಧ್ವಜಾರೋಹಣ, ಅನ್ನಸಂತರ್ಪಣೆ, ರಾತ್ರಿ ನಿತ್ಯಬಲಿ ಉತ್ಸವ, ತುಳು ಯಕ್ಷಗಾನ ಶ್ರೀ ಮಂಗಳಾದೇವಿ ಮೇಳದವರಿಂದ ಬಂಗಾರ್‍ದ ಕುರಾಲ್, ಮಾ.19 ಮಧ್ಯಾಹ್ನ ಪುಣ್ಯಾಹ ಕಲಶಾಭಿಷೇಕ, ರಾತ್ರಿ ನಿತ್ಯ ಬಲಿ, ಪಲ್ಲಕ್ಕಿ ಉತ್ಸವ, ರಾತ್ರಿ ಸರಪಾಡಿ ಅಗ್ರಹಾರದಲ್ಲಿರುವ ದೈವಂಗಳ ನೇಮ, ದೈವ-ದೇವರ ಭೇಟಿ, ಪಲ್ಲಕ್ಕಿಯಲ್ಲಿ ಬೀದಿ ಸವಾರಿ, ಮಾ.20 ಮಧ್ಯಾಹ್ನ ಅಂಕುರಪೂಜೆ, ರಥಕಲಶ, ರಾತ್ರಿ ಧರ್ಮ ದೈವ ಪಂಜುರ್ಲಿ ನೇಮೋತ್ಸವ, ನಡು ಬಲಿ ದರ್ಶನ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಚಂದ್ರ ಮಂಡಲೋತ್ಸವ, ಅಶ್ವತ್ಥ ಕಟ್ಟೆ ಪೂಜೆ, ಮಾ.21 ಬೆಳಗ್ಗೆ ಉತ್ಸವ, ವಿಶೇಷ ಚೆಂಡೆ ವಾದನ ಬಲಿ, ಶ್ರೀ ಮನ್ಮಹಾರಥಾರೋಹಣ, ರಾತ್ರಿ ಥಂಡರ್ ಗೈಸ್ ಫೌಂಡೇಷನ್ ಬಜ್ಪೆ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ , ಶಾಂತಿಗುಡ್ಡೆ ಧರ್ಮ ದೈವ ಶ್ರೀ ರಕ್ತೇಶ್ವರೀ ನೇಮೋತ್ಸವ, ರಾತ್ರಿ ವಲಸರಿ ಇಳಿಯುವುದು, ಮಹಾರಥೋತ್ಸವ, ಬಟ್ಟಲು ಕಾಣಿಕೆ, ಬಲಿ ಉತ್ಸವ, ದೇವರ ಶಯನ, ಕವಾಟ ಬಂಧನ, ಮಾ.22 ಬೆಳಗ್ಗೆ ಕವಾಟೋದ್ಘಾಟನೆ, ಶ್ರೀ ಶರಭೇಶ್ವರ ದೇವರ ದಿವ್ಯ ದರ್ಶನ, ತುಲಾಭಾರ ಸೇವೆ, ಮಧ್ಯಾಹ್ನ ಚೂರ್ಣೋತ್ಸವ, ಪಲ್ಲಪೂಜೆ, ಸಂಜೆ ಕೋಡಿ ಕಲ್ಲುರ್ಟಿ ದೈವದ ಭಂಡಾರ ಬರುವುದು, ರಾತ್ರಿ ಕಲ್ಲುರ್ಟಿ ದೈವದ ನೇಮೋತ್ಸವ ಮತ್ತು ಓಕುಳಿ, ದೇವರ ಬಲಿ ಉತ್ಸವ , ನೇತ್ರಾವತಿ ನದಿಯಲ್ಲಿ ಅವಭೃತ ಸ್ನಾನ, ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಶರಭೇಶ್ವರ ದೇವರಿಗೆ ಹಾಗೂ ಶ್ರೀ ವೆಂಕಟರಮಣ ದೇವರಿಗೆ ಮಹಾಪೂಜೆ ಮತ್ತು ಕಲ್ಲುರ್ಟಿ ದೈವಕ್ಕೆ ಹರಕೆ ಒಪ್ಪಿಸುವುದು, ಧ್ವಜಾವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆಯೊಂದಿಗೆ ಮಂಗಳ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
