Friday, June 27, 2025

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನ : ಧ್ವಜಸ್ತಂಭದ ಮರ ಕಡಿಯುವುದಕ್ಕೆ ಮುಹೂರ್ತ ಪೂಜೆ

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಭಾಗವಾಗಿ ನೂತನ ಧ್ವಜಸ್ತಂಭಕ್ಕೆ ಸುಳ್ಯದ ಗೂನಡ್ಕದ ಬಳಿಯ ರಾಮಚಂದ್ರ ಕಲ್ಲುಗದ್ದೆ ಅವರ ಜಮೀನಿನ ಮರ ಕಡಿಯುವುದಕ್ಕೆ ಗುರುವಾರ ಮುಹೂರ್ತ ಪೂಜೆ ನೆರವೇರಿತು.

ಪುರೋಹಿತರಾದ ಗಣಪತಿ ಐತಾಳ್ ಹಾಗೂ ವಿಜಯಕೃಷ್ಣ ಐತಾಳ್ ಪೂಂಜೂರು ಅವರ ವೈದಿಕ ಕಾರ್ಯದೊಂದಿಗೆ ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರ ಉಪಸ್ಥಿತಿಯಲ್ಲಿ ಪೂಜೆ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್. ಶೆಟ್ಟಿ ಸರಪಾಡಿ ಹಾಗೂ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾಲಕರಿಂದ ಅನುಮತಿ ಪಡೆದರು.
ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಅವರು ಸಹಕಾರದಿಂದ ಜೀರ್ಣೋದ್ಧಾರದ ಆರ್ಥಿಕ ಸಮಿತಿಯ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅವರ ನೇತೃತ್ವದಲ್ಲಿ ಈ ಕಾರ್ಯ ನೆರವೇರಿತು. ಬಡಗಿ ಹರೀಶ್ ಮಠದಬೆಟ್ಟು ಅವರು ಕಡಿಯುವ ಗುರುತು ಹಾಕಿದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಎಚ್, ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಆಡಳಿತ ಸಮಿತಿಯ ವಿಠಲ್ ಎಂ.ಆರುಮುಡಿ, ಉಮೇಶ್ ಆಳ್ವ ಕೊಟ್ಟುಂಜ, ಸುರೇಂದ್ರ ಪೈ, ಕೊರಗಪ್ಪ ಗೌಡ, ದಯಾನಂದ ಕೋಡಿ, ಪ್ರಮುಖರಾದ ಸುಂದರ ಶೆಟ್ಟಿ ಎಚ್, ರಾಧಾಕೃಷ್ಣ ರೈ ಕೊಟ್ಟುಂಜ, ಚಂದ್ರಹಾಸ ಬಲಯೂರು, ಸಂತೋಷ್ ಶೆಟ್ಟಿ ಪಿ, ನಾರಾಯಣ ದೇವಾಡಿಗ, ಪ್ರದೀಪ್ ರೈ, ಜಗದೀಶ್ ಕೋಡಿ, ಗಿರೀಶ್ ನಾಯ್ಕ್, ಅಶೋಕ್ ಪೂಜಾರಿ ಎಚ್, ಆನಂದ ಶೆಟ್ಟಿ ಆರುಮುಡಿ, ಯೋಗೀಶ್ ಎಲ್, ಯೋಗೀಶ್ ಎ, ಚೇತನ್ ಬಜ, ವಚನ್ ಬಜ, ಸುನೀಲ್ ಮೀಯಾರುಪಲ್ಕೆ, ಸುಂದರ ಬಾಚಕೆರೆ, ವಿಜೇತ್ ಶೆಟ್ಟಿ, ರಾಹುಲ್ ಕೋಟ್ಯಾನ್, ಕೀರ್ತನ್ ಭಂಡಾರಿ, ಧನ್ಯರಾಜ್ ದೇವಾಡಿಗ, ಗುರುಪ್ರಸಾದ್ ದೇವಾಡಿಗ ಪಾಲ್ಗೊಂಡಿದ್ದರು.

More from the blog

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...