ವಿಟ್ಲ: ಹಬ್ಬಗಳ ಮೂಲಕ ಸೌಹಾರ್ದತೆಯನ್ನು ಸಾರುವ ಕಾರ್ಯವನ್ನು ಮಾಡಬೇಕಾಗಿದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕದಡುವ ಕಾರ್ಯವನ್ನು ಯಾರೇ ಮಾಡಿದರೂ ಕಾನೂನು ಕ್ರಮಕೈಗೊಳ್ಳಲಾಗುವುದು. ಅನಗತ್ಯವಾಗಿ ಅವಕಾಶಗಳನ್ನು ಮಾಡಿಕೊಳ್ಳುವ ಕಾರ್ಯ ಸರಿಯಲ್ಲ ಎಂದು ವಿಟ್ಲ ಎಸ್ ಐ ಯಲ್ಲಪ್ಪ ಹೇಳಿದರು.
ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ ಬಕ್ರಿದ್ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ವಾಹನ ಚಾಲಕರಿಗೆ ಕೆಲವು ದಿನದಿಂದ ದಂಡ ವಿಧಿಸದೇ ನೋಟೀಸ್ ನೀಡಲಾಗುತ್ತಿದೆ. ವಾಹನ ನಿಯಮ ತಪ್ಪಿದಲ್ಲಿ ವಿಧಿಸುವ ದಂಡಗಳ ಮೊತ್ತ ಗಣನೀಯವಾಗಿ ಏರಿಕೆಯಾಗಿದ್ದು, ಪ್ರತಿಯೊಬ್ಬರೂ ಕಾನೂನು ತಪ್ಪಿ ನಡೆದು ಕೊಳ್ಳಬಾರದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಎಸ್. ಮಹಮ್ಮದ್, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೃಷ್ಣಯ್ಯ ಕೆ., ರಮಾನಾಥ ವಿಟ್ಲ, ನಿವೃತ್ತ ಸೈನಿಕ ಹರೀಶ್ ಶೆಟ್ಟಿ ಸೇರಿ ನಾನಾ ಸಮಾಜದ ಮುಖಂಡರು ಹಾಜರಿದ್ದರು.
ಸಿಬ್ಬಂದಿಗಳಾದ ಸತೀಶ್ ಸ್ವಾಗತಿಸಿದರು. ಲೋಕೇಶ್ ವಂದಿಸಿದರು. ಎಎಸ್‌ಐ ಧನಂಜಯ, ರವೀಶ್, ರಘುರಾಮ ಸಹಕರಿಸಿದರು.

