ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ನೆಕ್ಕಿಲಾರ್‌ನ ಸಂಜೀವ ಪೂಜಾರಿ ಹಾಗೂ ಸುಂದರಿ ದಂಪತಿಗಳ ಪುತ್ರರಾಗಿ ಜನಿಸಿ ದೇಶ ಸೇವೆಯ ತುಡಿತದೊಂದಿಗೆ ಭಾರತೀಯ ಸೇನೆಗೆ ಸೇರ್ಪಡೆಗೊಂಡು ದೇಶದ ವಿವಿದೆಡೆ ಕರ್ತವ್ಯ ನಿರ್ವಹಿಸಿ , ಯುದ್ಧಗಳಲ್ಲೂ ಪಾಲ್ಗೊಂಡು ತನ್ನ ಜೀವದ ಹಂಗನ್ನು ತೊರೆದು ಭಾರತ ಮಾತೆಯ ರಕ್ಷಣೆಗಾಗಿ ಹೋರಾಡಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಸುಮಾರು 32 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಇದೀಗ ಸೇವಾ ನಿವೃತ್ತಿ ಪಡೆದು ತವರೂರಿಗೆ ಆಗಮಿಸಿದ್ದು ಇವರಿಗೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಶಾಲು ಹೊದಿಸಿ ಅಭಿನಂದಿಸಿದರು ಬಳಿಕ ನಿವೃತ್ತಿ ಯೋಧ ದಾಸಪ್ಪನವರ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸುಧರ್ಶನ್ ಜೈನ್,ಮಾಜಿ ಎಪಿಎಂಸಿ ಅಧ್ಯಕ್ಷರಾದ ಪದ್ಮನಾಭ ರೈ,ಪಾಣೆಮಂಗಳೂರು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ಪೂಜಾರಿ, ವೀರಕಂಬ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ,ಬರಿಮಾರು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೇಶವ ಪೂಜಾರಿ,ಸಿದ್ದಿಕ್ ಸೇರಾವ್ ಹಾಗೂ ವೀರಕಂಬ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.

