ಬಂಟ್ವಾಳ: ಲಯನ್ಸ್ ಕ್ಲಬ್ ಲೋರೆಟ್ಟೊ-ಆಗ್ರಾರ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರನ್ನು ಅವರ ನಿವಾಸದಲ್ಲಿ ಸನ್ಮಾನಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಲೋರೆಟ್ಟೊ ನಿರ್ಮಲ ಕಾನ್ವೆಂಟ್ ನಲ್ಲಿರುವ ಬಗಿನಿ ಸ್ಟೆಲ್ಲಾ ಮೇರಿ ಡಿಸೋಜಾ ಹಾಗೂ ತೆರೆಸಾ ಮಸ್ಕರೇನಸ್ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಅವರನ್ನು ಗೌರವಿಸಲಾಯಿತು. ಕ್ಲಬ್ ನ ಅಧ್ಯಕ್ಷರಾದ ಕ್ಯಾಪ್ಟನ್ ಲಿಗೋರಿ ಲೋಬೊ ಮಾತನಾಡಿ ಶಿಕ್ಷಕರು ಒಳ್ಳೆಯ ಸಮಾಜವನ್ನು ನಿರ್ಮಿಸುವ ಆಧಾರ ಸ್ತಂಭಗಳು, ಅವರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ನೀಡುವ ಮೂಲಕ ಅವರನ್ನು ನಾವು ವಂದಿಸುತ್ತೆವೆ. ಸನ್ಮಾನ ಸ್ವೀಕರಿಸಿ ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯ ಸಿಹಿ, ಕಹಿ ಘಟನೆಗಳನ್ನು ಹಂಚಿ ಕೊಂಡರು. ಕ್ಲಬ್ ನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ಐರಿನ್ ಡಿಸೋಜಾ ವಂದಿಸಿದರು.

