ವಿಟ್ಲ: ವಿಟ್ಲದ ಬಸವನಗುಡಿ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿ ಕೂಡೂರು ಇವರು 2019ನೇ ಸಾಲಿನ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 625 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದು, ಕೂಡೂರು ಲಕ್ಷ್ಮೀನಿಲಯದಲ್ಲಿ ಇವರನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದ ಕ ಜಿಲ್ಲಾ ಲೋಕಸಭಾ ಚುನಾವಣೆಯ ಬಿಜೆಪಿ ಸಹಸಂಚಾಲಕ ಗೋಪಾಲಕೃಷ್ಣ ಹೇರಳೆ, ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ ಉಕ್ಕುಡ, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಸದಸ್ಯರುಗಳಾದ, ರಾಮದಾಸ ಶೆಣೈ, ಮಂಜುನಾಥ ಕಲ್ಲಕಟ್ಟ ಮತ್ತು ಶ್ರೀಕೃಷ್ಣ ವಿಟ್ಲ, ಚಂದ್ರಶೇಖರ ಬಪ್ಪಳಿಗೆ, ಮೋಹನ ಸೇರಾಜೆ, ನಾಗೇಶ ಬಸವನಗುಡಿ, ನರಸಪ್ಪ ಪೂಜಾರಿ, ಚಿನ್ಮಯಿಯ ಅಜ್ಜ ಅಜ್ಜಿ ಜಯರಾಮ ಭಟ್ ದಂಪತಿ, ಅಪ್ಪ ಅಮ್ಮ ರಾಜನಾರಾಯಣ ದಂಪತಿ ಮತ್ತು ಚಿರಂತನ್ ಉಪಸ್ಥಿತರಿದ್ದರು.


