ಬಂಟ್ವಾಳ: ಆಸೆ, ಆಕಾಂಕ್ಷೆಗಳಿಗೆ ಬಲಿಯಾಗದೆ, ತನ್ನ ತೃಪ್ತಿಗೆ ಸರಿಯಾಗಿ ಆತ್ಮಸಾಕ್ಷಿಯ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆಯೆ ಶ್ರೆಷ್ಟ ಸೇವೆ ಇಂತಹ ಸಮಾಜ ಮುಖಿ ಕೆಲಸವು ಸಮಾಜದಿಂದ ಗೌರವಿಸಲ್ಪಡುವಾಗ ಜೀವನ ಸಾರ್ಥಕ ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ.
ಅವರು ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತೀಯ ಕರ್ಪೆ ಅಂಚೆ ಕಚೇರಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ಇದೀಗ ನಿವ್ರತ್ತಿ ಹೊಂದಿದ ಜೀನಶ್ರೀ ಎಂಬವರಿಗೆ ಕರ್ಪೆ ಸಮಾಜ ಮಂದೀರದಲ್ಲಿ ನಡೆದ ಗೌರವ ಅಭಿನಂದನೆ ಸಲ್ಲಿಸಿ ಮಾತನಾಡಿದರು.


ಮುಖ್ಯ ಅಥಿತಿಯಾಗಿದ್ದ ನಿವೃತ್ತ ಶಾಲಾ ಪರಿವೀಕ್ಷಣಾ ಅಧಿಕಾರಿ ನಾರಾಯಣ ನಾಯಕ್ ಮಾತಾಡಿ ಸರಕಾರಿ ನೌಕರರು ನಿವೃತ್ತಿ ನಂತರವೂ ಸಮಾಜ ಸೇವೆ ಯಾತ್ತ ಮುಖ ಮಾಡುವುದರಿಂದ ಆರೊಗ್ಯ ಸೇರಿ ದಂತೆ ಮನಸ್ಸಿಗೆ ನೆಮ್ಮದ್ದಿ ಸಿಗಲು ಸಾದ್ಯ ಎಂದರು.
ಅಂಗನವಾಡಿ ಇಲಾಖೆ ಯ ಮೆಲ್ವೀಚಾರಕಿ ನೀತಾ ಮಾತಾಡಿ ದೇವರ ಗುಣದಂತೆ ಇರುವ ಪುಟಾಣಿ ಮಕ್ಕಳ ಸೇವೆ ಮಾಡುವ ಭಾಗ್ಯ ಮಹತ್ವದ ಕಾರ್ಯ ಎಂದರು.
ಗ್ರಾಮ ಪಂಚಾಯತ್ ಸದಸ್ಯರಾದ ದೇವಪ್ಪ ಕರ್ಕೆರ, ಬಿ. ಶೇಖರ ನಾಯ್ಕ, ಸುಭಾಕ್ಸಿಣಿ., ಪಂಜಿಕಲ್ಲು ಆರೊಗ್ಯ ಸಹಾಯಕಿ ಗೀತಾ, ಸಿದ್ದಕಟ್ಟೆ ರೋಟರಿ ಸಮುದಾಯ ದಳದ ಅದ್ಯಕ್ಷ ಮದ್ವರಾಜ್ ಜೈನ್ ,ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಜೀನಶ್ರೀ ತನಗೆ ಗ್ರಾಮಸ್ತರು ನೀಡಿದ ಸೇವೆ ಗೆ ಅಭಾರಿಯಾಗಿದ್ದೆನೆ ಎಂದರು.
ಸಮಾರಂಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಲೀಲಾ, ಸಹಾಯಕಿ ಸಂದ್ಯಾ ಪ್ರಭು, ಪ್ರಮುಖರಾದ .ಕೆ.ರಾಮಕೃಷ್ಣ ನಾಯಕ್, ವೆಂಕಟೇಶ ನಾಯಕ್ , ನವೀನ ಪೂಜಾರಿ , ಕರ್ಪೆ ಅಂಚೆ ಕಚೇರಿ ಪೊಸ್ಟ್ ಮಾಸ್ಟರ್ ಗಣೇಶ್ , ಶಿಕ್ಷಕ ಭರತ್ ಜೈನ್, ರಮೆಶ್ ಶೆಣೈ,ಅಶಾ ಕಾರ್ಯಕರ್ತೆ ಭಾನುಮತಿ ಭಟ್, ಮಾಜಿ ಗ್ರಾ.ಪ.ಸದಸ್ಯೆ ಮಲ್ಲಿಕಾ, ಜನರ್ದಾನ ಪ್ರಭು, ಅಲ್ಲದೆ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ಅಂಗನವಾಡಿ ಕಾರ್ಯಕರ್ತೆಯಾರಾದ ಲೀಲಾ ಸ್ವಾಗತಿಸಿ, ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಕೃಷ್ಣ ಪ್ರಭು ವಂದಿಸಿದರು.