ಬಂಟ್ವಾಳ : ಸಂಗಬೆಟ್ಟು ಗ್ರಾಮ ಪಂಚಾಯತ್ ತನ್ನ ಸ್ವಂತ ನಿಧಿಯಾಡಿಯಲ್ಲಿ ವಿಕಲಚೇತನರಿಗೆ ಈ ವರ್ಷದಲ್ಲಿ ಮಿಸಲಿರಿಸಿದ ಸೂಮಾರು 40000 ಅನುದಾನದಲ್ಲಿ ವಿಕಲ ಚೇತನರಿಗೆ ಸಹಾಯಧನ ವಿತರಣೆ ಮಾಡಲಾಗಿದ್ದು ಮನೆಯಿಂದ ಪಂಚಾಯತ್ ಕಚೇರಿಗೆ ಬರಲು ಆಸಾಧ್ಯವಾದವರಿಗೆ ಮನೆ ಬಾಗಿಲಿಗೆ ಹೋಗಿ ಸವಲತ್ತುನ ಸಹಾಯ ಧನ ವಿತರಿಸಲಾಯಿತು.

ವಿಕಲ ಚೇತನರಿಗೆ ತಲಾ 5000 ದಂತೆ ವಿತರಣೆ ಮಾಡಲಾಗಿದೆ.
ಕೊರೋಣಾ ದಿಂದಾಗಿ ಲಾಕ್ ದೌನ್ ಇರುವ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದ ಕರ್ಪೆ ಗ್ರಾಮದ ನಿವಾಸಿ ವಿಕಲ ಚೇತನರಾದ ಶೇಖರ ಪೂಜಾರಿ ಮನೆಗೆ ಗ್ರಾಮ ಪಂಚಾಯತ್ ಆಡಳಿತವು ಭೇಟಿ ನೀಡಿ ಕುಟುಂಬಕ್ಕೆ ಗ್ರಾಮ ಪಂಚಾಯತ್ ನೆರವಾಗುವ ಮುಲಕ ಆಸರೆ ಯಾಗಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಸಹಾಯಧನ ಚೆಕ್ ನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ ಅಲಕ್ಕೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ ಕೋಟಿಯಪ್ಪ ಪೂಜಾರಿ, ವಿದ್ಯಾ ಪ್ರಭು, ದಾಮೋದರ ಪೂಜಾರಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ನಾಯ್ಕ್, ಉಪಸ್ಥಿತರಿದ್ದರು.
