ಉಪ್ಪಿನಂಗಡಿ: ಕುಮಾರಧಾರ ನೇತ್ರಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ಪಾತ್ರದ ಹಲವು ಪ್ರದೇಶಗಳು ಜಲಾವೃತಗೊಂಡಿದೆ.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಯು ಶ್ರೀ ಮಹಾಕಾಳಿ ದೇವಾಲಯವನ್ನು ದಾಟಿ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದ ಆವರಣದತ್ತ ಬಂದಿದ್ದು ದೇವಾಲಯದ ಇನ್ನೋಂದು ಬದಿಯಿಂದ ಕುಮಾರಧಾರ ನದಿಯ ನೀರು ಬಂದರೆ ಎರಡು ನದಿಗಳು ದೇವಾಲಯದ ಮುಂಭಾಗ ಸಂಗಮವಾಗಲಿದೆ. ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಈ ಸಂಗಮದ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.