ಪುಂಜಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಲಕಟ್ಟೆಯಲ್ಲಿ ವಿ.ವಿ ಮಟ್ಟದ ಬಾಲ್ ಬ್ಯಾಂಡ್ಮಿಂಟನ್ ಸಮಾರಂಭದಲ್ಲಿ ಕಾಲೇಜು ವಾರ್ಷಿಕ ಸಂಚಿಕೆ ತೇಜಃ ಪುಂಜವನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜ್ವಲ್ ಸಂತೋಷ್ ಬಿಡುಗಡೆ ಗೊಳಿಸಿದರು.


ಪ್ರಾಂಶುಪಾಲರಾದ ಫ್ರೊ. ಗಣಪತಿ ಭಟ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ. ಕೆ. ಮುಖ್ಯ ಅಥಿತಿಯಾಗಿದ್ದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಳ್ಳಿಮನೆ ಹೈದರಾಲಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ರವಿಶಂಕರ್, ಸಂಚಿಕೆಯ ಸಂಪಾದಕರಾದ ಪ್ರೊ. ರಾಜೇಶ್ವರಿ ಎಚ್. ಎಸ್, ಡಾ. ಕೃಷ್ಣಾನಂದ ಪಿ.ಎಮ್, ಭಾರತೀಯ ಸೇನೆಯ ರಂಜಿತ್ ಉಪಸ್ಥಿತರಿದ್ದರು. ಪ್ರೊ. ವಿಶಾಲ್ ಪಿಂಟೊ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.

