Saturday, July 5, 2025

ಜ.26-ಫೆ.3: ಸಾಲೆತ್ತೂರಿನಲ್ಲಿ ಶಿವಪಂಚಾಕ್ಷರಿ ಪಾರಾಯಣ, ಅಖಂಡ ಭಜನಾ ಸಪ್ತಾಹ

ವಿಟ್ಲ: ಸಾಲೆತ್ತೂರು ನವಚೇತನ ಯುವಕ ಮಂಡಲ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಶಿವಪಂಚಾಕ್ಷರಿ ಪಾರಾಯಣ, ಅಖಂಡ ಭಜನಾ ಸಪ್ತಾಹ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜ.26ರಿಂದ ಫೆ.3ರ ವರೆಗೆ ನಡೆಯಲಿದೆ ಎಂದು ಅಧ್ಯಕ್ಷ ಸೋಮನಾಥ ಪಾಲ್ತಾಜೆ ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜ.26ರಂದು ಬೆಳಗ್ಗೆ ಗಣಪತಿ ಹೋಮ, ಬೆಳಗ್ಗೆ ಸೂರ್‍ಯೋದಯದಿಂದ ಸಂಜೆ ಸೂರ್‍ಯಸ್ತದವರೆಗೆ ಸಾಮೂಹಿಕ ಶಿವಪಂಚಾಕ್ಷರಿ ಪಾರಾಯಣ ನಡೆಯಲಿದೆ.
27ರಂದು ಬೆಳಗ್ಗೆ ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಅಖಂಡ ಭಜನಾ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಬಳಿಕ ನಾನಾ ಸಂಘಗಳಿಂದ ಭಜನೆ ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್‍ಯಕ್ರಮದಲ್ಲಿ ಸೋಮನಾಥ ಪಾಲ್ತಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಮುಖಂಡ ಶ್ರೀಕೃಷ್ಣ ಭಜನೆ ಮಹತ್ವದ ಬಗ್ಗೆ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ವನಾಥ ಪೂಜಾರಿ ನರ್ಕಳ, ಶಿವರಾಮ ಶೆಟ್ಟಿ ಕೊಲ್ಲಾಡಿ, ವಿದ್ಯೇಶ್ ರೈ ಕಿಲ್ಲಂಬಲೆಪಡ್ಪು, ಶೇಖರ ಪೂಜಾರಿ ಉಳಿಯತ್ತಡ್ಕ, ಗೋಪಾಲ ಸಪಲ್ಯ ಕಲ್ಲಮಜಲು, ಗೋಪಾಲ ಮಾಸ್ತರ್ ದಾರೆಪಡ್ಪು, ಲಕ್ಷ್ಮಣ ಸಪಲ್ಯ ಸಾಲೆತ್ತೂರು, ಧನಂಜಯ ಕಟ್ಟತ್ತಿಲ, ವಿಷ್ಣುಮೂರ್ತಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಯುವಕ ಮಂಡಲದ ಹಿರಿಯ ಸದಸ್ಯ ಕೃಷ್ಣಪ್ಪ ಶೆಟ್ಟಿಗಾರ್ ಮಾವೆ ಅವರನ್ನು ಸನ್ಮಾನಿಸಲಾಗುವುದು.
ಪ್ರತಿದಿನ ಸಂಜೆ ಧಾರ್ಮಿಕ ಸಭೆ, ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಲಿದೆ ಎಂದರು.
ಜ. 30ರಂದು ನಡೆಯುವ ಧಾರ್ಮಿಕ ಸಮಾರೋಪ ಸಮಾರಂಭದಲ್ಲಿ ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಉದ್ಯಮಿ ಮಾಧವ ಮಾವೆ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಾಲೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಮೇಗಿನಮಲಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಟಿ. ತಾರಾನಾಥ ಕೊಟ್ಟಾರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ವೆಂಕಪ್ಪ ಶೆಟ್ಟಿಗಾರ್ ಪಾಲ್ತಾಜೆ, ಪ್ರಧಾನ ಕಾರ್‍ಯದರ್ಶಿ ರಾಮಚಂದ್ರ ಬಿ. ಶೆಟ್ಟಿಗಾರ್ ಅಗರಿ, ಕೋಶಾಧಿಕಾರಿ ಶೇಖರ ಪೂಜಾರಿ ಮಾವೆ, ಗೌರವ ಸಲಹೆಗಾರ ಶಂಕರ್ ಶೆಟ್ಟಿಗಾರ್ ಮಾವೆ ಉಪಸ್ಥಿತರಿದ್ದರು.

More from the blog

Bantwal Rain Damage: ಅನೇಕ ಮನೆಗಳಿಗೆ ಹಾನಿ

ಬಂಟ್ವಾಳ: ಜುಲೈ 3 ರಂದು ರಾತ್ರಿ ಸುರಿದ ಮಳೆಗೆ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿ ಸಂಭವಿಸಿದ್ದು, ಲಕ್ಷಾಂತರ ರೂ‌ ನಷ್ಟ ಸಂಭವಿಸಿದೆ. ನೆಟ್ಲ ಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಏಮಾಜೆ ಭಜನಾ ಮಂದಿರ ಬಳಿಯ ದೇವಪ್ಪ...

Rural station: ಮೇಯಲು ಬಿಟ್ಟ ಕರುಗಳ ಕಳವು, ಸಿ.ಸಿ.ಟಿ.ವಿಯಲ್ಲಿ ದೃಶ್ಯ ಸೆರೆ

ಬಂಟ್ವಾಳ: ಮೇಯಲು ಹೋಗಿದ್ದ ಕರುಗಳು ನಾಪತ್ತೆ, ಕರುಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಕದ್ದುಕೊಂಡುವ ಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿರುವುದು,ಮಾಲೀಕರಿಗೆ ದೊರಕಿದ್ದು, ಇದೀಗ ಕರುಗಳನ್ನು ಪತ್ತೆ ಮಾಡಿಕೊಡಿ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ...

B. C. ROAD : ಜು.19ರಿಂದ 27ರವರೆಗೆ ಭಾರತ ದರ್ಶನ ಯಕ್ಷಗಾನ ತಾಳಮದ್ದಳೆ ನವಾಹ..

ಬಂಟ್ವಾಳ : ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಅವರಿಂದ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಸಹಭಾಗಿತ್ವದಲ್ಲಿ ಭಾರತ ದರ್ಶನ ಎಂಬ ಯಕ್ಷಗಾನ ತಾಳಮದ್ದಳೆ...

ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ: ಬೇಬಿ ಕುಂದರ್….

ಬಂಟ್ವಾಳ : ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಜನರ ಸಮಸ್ಯೆ ಪರಿಹಾರ ಮಾಡುತ್ತೇನೆ, ಭ್ರಷ್ಟಾಚಾರ ರಹಿತ ಕೆಲಸಕ್ಕೆ ಒತ್ತು ನೀಡುವುದಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ‌ಕುಂದರ್ ತಿಳಿಸಿದ್ದಾರೆ. ನಗರ ಯೋಜನಾ ಪ್ರಾಧಿಕಾರದ...