Friday, July 11, 2025

ಸಜೀಪನಡು ಗ್ರಾಮ ಲಾಕ್ ಡೌನ್: ಗ್ರಾಮಾಂತರ ಎಸ್.ಐ. ಪ್ರಸನ್ನ ಮೊಕ್ಕಾಂ

ಬಂಟ್ವಾಳ: ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಎಂಬ ಸುದ್ದಿ ಬೆಳಿಗ್ಗೆ ಯಿಂದ ಹರಡಿತ್ತು.
ಈತನ ಮನೆಯಿಂದ ತಪ್ಪಿಸಿಕೊಂಡು ಹೋದ ಎಂಬ ವದಂತಿ ಹಬ್ಬಿತ್ತು ಅಲ್ಲದೆ ಜನರು ಒಂದು ರೀತಿಯ ಭಯದಿಂದ ಕೂಡಿದ್ದರು.


ಸಜೀಪನಡು ಗ್ರಾಮದ ಲಕ್ಷಣ ಕಟ್ಟೆಯ ಎಳೆಯ ಕಂದಮ್ಮನಿಗೆ ಕೊರೊನೊ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ಮನೆಯಲ್ಲಿರುವ ಮಗುವಿನ ಅಜ್ಜ, ಮಗುವಿನ ಅಪ್ಪ, ಚಿಕ್ಕಪ್ಪ ಹಾಗೂ ಚಿಕ್ಕಮ್ಮ ನನ್ನು ಮುಡಿಪುವಿನ ಪ್ರತ್ಯೇಕ ಮನೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
ಆದರೆ ಮಗುವಿನ ಅಜ್ಜ ಮಾತ್ರ ಇಂದು ಮುಂಜಾನೆ ವೇಳೆ ಮುಡಿಪುವಿನ ಮನೆಯಿಂದ ಹೊರಗೆ ಬಂದು ಆತ ಸಮೀಪನಡು ಗ್ರಾಮದ ಮನೆಗೆ ಆತ ಮುಂಜಾನೆ ಬಂದಿದ್ದ ಕೂಡಲೇ ಬಂಟ್ವಾಳ ಗ್ರಾಮಾಂತರ ಪೋಲೀಸರು ಆತನನ್ನು ವಾಪಾಸು ಮುಡಿಪುವಿನಲ್ಲಿನ ಇಲಾಖೆ ಸೂಚಿಸಿದ ಹೊಂಕ್ವಾರಂಟೈನ್ ಗೆ ಕಳುಹಿಸಿದ್ದಾರೆ.
ಆತನಿಗೆ ಇಲ್ಲಿಗೆ ಬರಲು ವಾಹನದ ನೆರವು ನೀಡಿದವರು ಯಾರು ಮತ್ತು ಇಷ್ಟು ಪೋಲೀಸ್ ಸರ್ಪಗಾವಲು ಇದ್ದರೂ ಆತ ಹೇಗೆ ಬಂದ ಎಂಬುದೇ ಪ್ರಶ್ನೆಯಾಗಿದೆ.

ಸಜೀಪ ನಡು ಗ್ರಾಮದ ಲಕ್ಷಣಕಟ್ಟೆ ಎಂಬಲ್ಲಿನ 10 ತಿಂಗಳ ಕಂದಮ್ಮನಿಗೆ ಕೊರೊನೊ ಸೊಂಕು ದೃಡಪಟ್ಟ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಸಂಪೂರ್ಣ ಲಾಕ್ ಅಗಿದೆ.
ಪ್ರಸ್ತುತ ಪರಿಸ್ಥಿತಿ ಯಲ್ಲಿ ಅ ಗ್ರಾಮಕ್ಕೆ ಯಾರು ಬರುವಂತಿಲ್ಲ, ಹೊರಗಿನ ವ್ಯಕ್ತಿಗಳು ಇತ್ತ ಕಡೆ ನೋಡುವಂತೆ ಯೂ ಇಲ್ಲ್ .ಆರೋಗ್ಯ ಇಲಾಖೆಯ ನಿರ್ದೇಶನದಂತೆ ಗರಿಷ್ಠ ದಿನಗಳವರೆಗೆ ಇದೇ ರೀತಿ ಮುಂದುವರಿಯುತ್ತದೆ.
ಈ ಗ್ರಾಮದ ಜನರು ಯಾರೂ ಕೂಡಾ ಮನೆಯಿಂದ ಹೊರಬರುತ್ತಿಲ್ಲ, ಸಜೀಪನಡು ಪೇಟೆ ಸಂಪೂರ್ಣ ಬಂದ್ ಅಗಿದೆ. ಗ್ರಾಮದ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಗ್ರಾ.ಪಂ.ಅಧಿಕಾರಿಗಳ ನೇತ್ರತ್ವದಲ್ಲಿ ನೀಡಲಾಗುತ್ತಿದೆ.

ಗ್ರಾಮಾಂತರ ಎಸ್.ಐ.ಪ್ರಸನ್ನ ಸಜೀಪನಡು ಗ್ರಾಮದಲ್ಲಿ ಮೊಕ್ಕಾಂ

ಮಾ.26 ರಂದು ಗುರುವಾರ ಸಂಜೆ ಸೊಂಕು ಪ್ರಕರಣ ದ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಎಸ್. ಪಿ.ಲಕ್ಮೀಪ್ರಸಾದ್ ಬೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಬಳಿಕ ಕೊರೊನೊ ಪ್ರಕರಣ ದೃಡವಾದ ಬಳಿಕ ಮಾ.27 ರಂದು ಮತ್ತೆ ಸ್ಥಳಕ್ಕೆ ಭೇಟಿ ನೀಡಿ ದ ಎಸ್.ಪಿ.ಯವರು ಅಲ್ಲಿನ ಗ್ರಾ.ಪಂ.ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕ ಮಾಡಿ ಲಾಕ್ ಡೌನ ಸಂದರ್ಭದಲ್ಲಿ ಯಾರಿಗೂ ತೊಂದರೆ ಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಅದೇಶ ನೀಡಿದ್ದಾರೆ.
ಗುರುವಾರ ಸಂಜೆಯಿಂದ ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರು ಸಜೀಪನಡು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.
ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಯಾರು ಹೊರಗೆ ಬರದಂತೆ ಇವರ ಜೊತೆಯಲ್ಲಿ ಇವರ ಇಡೀ ಗ್ರಾಮಾಂತರ ಪೋಲೀಸ್ ಠಾಣೆಯ ತಂಡ ಹಗಲಿರುಳು ಶ್ರಮಿಸುತ್ತಿವೆ.
ಹೆಚ್ಚು ವರಿಯಾಗಿ ಒಂದು ಕೆ.ಎಸ್.ಆರ್.ಪಿ.ಪೋಲೀಸ್ ತುಕಡಿ ಕೂಡಾ ಇಲ್ಲಿ ಮೊಕ್ಕಾಂ ಹೂಡಿದ್ದಾರೆ.

ಹೋಂ ಕ್ವಾರಂಟೈನ್

ಮಗುವಿಗೆ ಸೊಂಕು ದೃಡವಾದ ಬಳಿಕ
ಮಗು ಸಹಿತ ತಾಯಿ ಹಾಗೂ ಅಜ್ಜಿ ಯನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ.
ಅವರಿಗೂ ಕೂಡ ಸೊಂಕು ತಗಲಿರುವ ಸಾಧ್ಯತೆ ಗಳಿರುವುದರಿಂದ ಅವರನ್ನು ನಿಗಾದಲ್ಲಿರಿಸಲಾಗಿದೆ.ಉಳಿದಂತೆ ಮಗವಿನ ತಂದೆ,ಚಿಕ್ಕಪ್ಪ, ಹಾಗೂ ಚಿಕ್ಕಮ್ಮ ಹಾಗೂ ಅಜ್ಜ ನನ್ನು ಮುಡಿಪುವಿನ ಪ್ರತ್ಯೇಕ ಮನೆಯಲ್ಲಿ ಹೋಂ.ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು‌ಇಲಾಖೆ ತಿಳಿಸಿದೆ.

ದ.ಕ.ಜಿಲ್ಲೆಯ ಲ್ಲಿ ಈವರಗೆ ಒಟ್ಟು 7 ಪ್ರಕರಣಗಳು ಪತ್ತೆಯಾಗಿದ್ದು ನೆರೆಯ ಕೇರಳದ ಲ್ಲಿ ದಿನೇ ದಿನ ಪ್ರಕರಣ ಗಳು ಜಾಸ್ತಿಯಾಗುತ್ತಿದೆ.

More from the blog

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳು ಸಮಸ್ಯೆ : ಜು.14ಕ್ಕೆ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ..

ಬಂಟ್ವಾಳ :ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ದುರಡಳಿತ ನೀತಿಯಿಂದಾಗಿ ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಕ್ರತಕ ಅಭಾವ ಸ್ರಷ್ಟಿಸಿರುವುದರಿಂದ ತೀವ್ರ ಸಮಸ್ಯೆಯಿಂದ ಬಡವರು ನಿರ್ಮಿಸುತ್ತಿರುವ ಸಾವಿರಾರು ಮನೆಗಳು...

ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆ : ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಶಾಸಕ ರಾಜೇಶ್ ನಾಯ್ಕ್ ನಿರ್ದೇಶನ..

ಬಂಟ್ವಾಳ: ದ.ಕ.ಜಿಲ್ಲೆಗೆ ಮಂಜೂರಾಗಿರುವ ಏಕೈಕ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನೂತನ ಸುಸಜ್ಜಿತ ‌ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಂಟ್ವಾಳ...