Thursday, June 26, 2025

ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಆಲಾಡಿಯಲ್ಲಿ ಸಮಸ್ಯೆಗಳ ಸರಮಾಲೆ

ಬಂಟ್ವಾಳ: ಮಳೆಗಾಲದಲ್ಲಿ ಇದು ತೋಡು, ಬೇಸಿಗೆ ಕಾಲದಲ್ಲಿ ವಾಹನ ಸಂಚಾರಕ್ಕೆ ರಸ್ತೆ. ಇದು ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಆಲಾಡಿ ರಸ್ತೆಯ ಸ್ಥಿತಿ!
ಮಳೆ ಬಂದರೆ ಈ ಭಾಗದ ಜನರು ರಸ್ತೆಯಲ್ಲಿ ಹೋಗುವಂತಿಲ್ಲ.
ರಸ್ತೆಯ ಎರಡು ಬದಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲಿ ನಿಂತು ರಸ್ತೆ ತೋಡಾಗಿ ಮಾರ್ಪಾಡು ಆಗಿದೆ.

 


ರಸ್ತೆಯಲ್ಲಿ ನಿಂತಿರುವ ನೀರು ಹರಿದುಹೋಗಲು ಜಾಗವಿಲ್ಲದೆ ಸುತ್ತಮುತ್ತಲಿನ ಮನೆಯ ಅಂಗಳದಲ್ಲಿ ನೀರು ಸಂಗ್ರಹವಾಗುತ್ತದೆ.
ಬಳಿಕ ಮನೆಯ ಅಂಗಳದಲ್ಲಿ ಇರುವ ಬಾವಿಗಳಿಗೆ ಕೆಸರು ತುಂಬಿದ ನೀರು ಹಾಗೂ ಕೆಲವು ಮನೆಯ ಬಾವಿಗಳು ಜರಿದುಹೋಗಿದೆ.
ಮನೆಯ ಅಂಗಳದಲ್ಲಿ ನೀರು ಶೇಖರಣೆ ಅಗಿರುವ ಪರಿಣಾಮ ಮನೆಯ ಗೋಡೆಗಳು ಬಿರುಕು ಬಿದ್ದಿದೆ.
ಇದು ಕಳೆದ ಹಲವಾರು ವರ್ಷಗಳ ಸಮಸ್ಯೆ. ಈ ಬಗ್ಗೆ ಸ್ಥಳೀಯರು ಗ್ರಾ.ಪಂ.ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಪ್ರತಿ ವರ್ಷ ಮಳೆಗಾಲದಲ್ಲಿ ಇವರು ಪಡುವ ಕಷ್ಟ ಹೇಳತೀರದು.
ನದಿಯಿಲ್ಲದಿದ್ದರೂ ಕೃತಕ ನೆರೆ ಈ ರಸ್ತೆಯಲ್ಲಿ ಬರುತ್ತದೆ.


ಚರಂಡಿ ಕೆಲಸ ಮಾಡಿದ ಎಸ್.ಡಿ.ಪಿ.ಐ.
ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮಸ್ಯೆಗಳ ಸಾಲು ಸಾಲು… ಸಜೀಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಆಲಾಡಿ ಪರಿಸರದಲ್ಲಿ ಮಳೆಗಾಲದಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆಯೆ ಹರಿದುಹೋಗುತ್ತಿದೆ. ಈ ಹಿನ್ನೆಲೆ ಮುಖ್ಯ ರಸ್ತೆಯ ಬಹುತೇಕ ಅಂದರೆ ವೈಜ್ಞಾನಿಕವಾಗಿ ಚರಂಡಿ ಇದ್ದು ಮಣ್ಣು ಬಿದ್ದು ಹೂಳು ತುಂಬಿಕೊಂಡ ಕಡೆಗಳಲ್ಲಿ ಎಸ್.ಡಿ.ಪಿ.ಐ. ಸಂಘಟನೆ ಸ್ವಂತ ಖರ್ಚಿನಲ್ಲಿ ಜೆ.ಸಿ.ಬಿ. ಬಳಸಿ ಚರಂಡಿಯ ಹೂಳೆತ್ತುವ ಕಾರ್ಯ ನಡೆಸಿತು. ಜೊತೆಗೆ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಸಿದರು.


ಅವೈಜ್ಞಾನಿಕ ಚರಂಡಿ
ಇಂದಿರಾನಗರ ಎಂಬಲ್ಲಿ ನಿರ್ಮಾಣ ಮಾಡಿರುವ ಚರಂಡಿ ಅವೈಜ್ಞಾನಿಕವಾಗಿದ್ದು, ಅದರಲ್ಲಿ ನೀರು ಸರಿಯಾಗಿ ಹರಿದು ಹೋಗುವುದಿಲ್ಲ. ನೀರು ಹರಿದು ಹೋಗದಿದ್ದರೂ ಇದರ ಹೂಳೆತ್ತುವ ಕಾರ್ಯಕ್ಕಾಗಿ ಸಾವಿರಾರು ರೂ. ಖರ್ಚು ಪಂಚಾಯತ್ ಮಾಡುತ್ತಿದೆ. ಜೊತೆಗೆ ಈ ಚರಂಡಿ ನೀರು ಹರಿದು ನದಿ ಸೇರಲು ವ್ಯವಸ್ಥೆ ಇಲ್ಲ. ಖಾಸಗಿ ವ್ಯಕ್ತಿಯೋರ್ವರ ಜಮೀನು ಮೂಲಕ ನೀರು ಹರಿದು ಹೋಗುತ್ತಿದ್ದು, ಪ್ರಸ್ತುತ ಅವರು ನೀರು ಅವರ ಜಮೀನು ಮೂಲಕ ಹರಿದುಹೋಗದಂತೆ ತಡೆ ಹಾಕಿದ್ದಾರೆ.
ಅವರ ಅಡಿಕೆ ಕೃಷಿಗೆ ಈ ನೀರು ನುಗ್ಗಿ ಕೃಷಿ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಅವರು ತಡೆ ಮಾಡಿದ್ದು, ಮೋರಿ ಹಾಕಿ ಅದರ ಮೂಲಕ ನೀರು ಹೋಗುವುದಾದರೆ ನನ್ನ ವಿರೋಧವಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಪಂಚಾಯತ್ ಮೋರಿ ಹಾಕಿಕೊಟ್ಟರೆ ಇಲ್ಲಿ ನೀರು ಶೇಖರಣೆಗೊಂಡು ರಸ್ತೆಯ ಮೇಲೆ ಹರಿದುಹೋಗುವುದು ತಪ್ಪುತ್ತದೆ ಎಂಬುದು ಸ್ಥಳೀಯರ ಮಾತು.
ಚರಂಡಿಯಲ್ಲಿ ಪೈಪ್ ಲೈನ್
ಮಳೆನೀರು ಹರಿದು ಹೋಗಲು ನಿರ್ಮಾಣ ಮಾಡಿರುವ ಚರಂಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಮಾಡಿರುವ ಕಾರಣ ನೀರು ಹರಿದು ಹೋಗುವಂತಿಲ್ಲ, ಹೂಳೆತ್ತಲು ಅಲ್ಲಿ ಜಾಗವಿಲ್ಲ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.


ಸ್ವಂತ ಖರ್ಚಿನಲ್ಲಿ ಚರಂಡಿ ಕೆಲಸ

ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಆಲಾಡಿ ಗ್ರಾಮದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಸಾಂಕ್ರಾಮಿಕ ರೋಗದ ಭಯ ನಿರ್ಮಾಣವಾದ ಹಿನ್ನೆಲೆಯಲ್ಲಿ ನಾವು ಸ್ವಂತ ಖರ್ಚಿನಲ್ಲಿ ಚರಂಡಿಯ ಹೂಳೆತ್ತುವ ಕಾರ್ಯ ನಡೆಸುತ್ತಿದ್ದೇವೆ. ಅದರ ಜೊತೆಗೆ ಶ್ರಮದಾನದ ಮೂಲಕ ಚರಂಡಿಯ ಸುತ್ತ ಸ್ವಚ್ಛ ಕಾರ್ಯ ನಡೆಸಿ ಗ್ರಾ.ಪಂ. ನ ಕಣ್ಣು ತೆರೆಸುವ ಕೆಲಸ ಮಾಡಿದ್ದೇವೆ. ಇನ್ನಾದರೂ ಎಚ್ಚತ್ತುಕೊಂಡು ಈ ಭಾಗದ ಸಮಸ್ಯೆಗಳನ್ನು ಪರಿಹರಿಸಲು ಎಸ್.ಡಿ.ಪಿ.ಐ ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಸಲೀಂ ಆಲಾಡಿ ಒತ್ತಾಯ ಮಾಡಿದ್ದಾರೆ.

More from the blog

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...