ಬಂಟ್ವಾಳ: ಜಿಲ್ಲಾಧಿಕಾರಿಯ ಆದೇಶದಂತೆ ಸಜಿಪನಡು ಗ್ರಾಮದ ನಿಯಂತ್ರಿತ ವಲಯಕ್ಕೆ ಘಟಕ ನಿಯಂತ್ರಿಕ ಅಧಿಕಾರಿ ಕಾರ್ಯ ನಿರ್ವಾಹಕ ಅಧಿಕಾರಿ ಬಂಟ್ವಾಳ ಇವರು ಏ.23 ರಂದು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದರು.



ಗ್ರಾಮದ ವಿವಿಧ ಪ್ರದೇಶಗಳ ಬಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿದರು. ಪ್ರಸ್ತುತ ಕೋವಿಡ್-19 ಪ್ರಕರಣದ 28 ದಿನದ ಅವಧಿ ಮುಕ್ತಾಯವಾಗಿದ್ದು, ಈಗಾಗಲೇ ಗ್ರಾಮ ಸೀಲ್ ಡೌನ್ ಆಗಿದೆ. ಜಿಲ್ಲಾಧಿಕಾರಿಯವರ ನಿರ್ದೇಶನ ಬರುವವರೆಗೂ ಈ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಪಂಚಾಯತ್ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.












