ಬಂಟ್ವಾಳ: ಸಜೀಪ ಚಟ್ಟಕಲ್ಲಿನಲ್ಲಿ ಅಸ್ಸಯ್ಯದ್ ಮುಷ್ತಾಖುರ್ಹ್ಮಾನ್ ತಂಙಲ್ ರವರ ನೇತೃತ್ವದಲ್ಲಿ ನಡೆದ ಜಲಾಲಿಯ ವಾರ್ಷಿಕದ ಪ್ರಯುಕ್ತ ಮೂರು ದಿನಗಳ ಕಾರ್ಯಕ್ರಮದ ಸಮಾರೋಪ ವು ಅಸ್ಸಯ್ಯದ್ ಪೂಕುಂಞಿ ಕೋಯಾ ತಂಙಲ್ ಉದ್ಯಾವರ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಪ್ರಖ್ಯಾತ ಯುವ ಧಾರ್ಮಿಕ ಪ್ರಭಾಷಣ ಗಾರರಾದ ಪೇರೋಡ್ ಮುಹಮ್ಮದ್ ಅಝ್ಹರಿ ಯವರು ಮುಖ್ಯ ಪ್ರಭಾಷಣ ಗೈದರು.
ಅಸ್ಸಯ್ಯದ್ ಮದಕ ತಂಙಲ್ ಅಬೂಸ್ವಾಲಿಹ್ ಉಸ್ತಾದ್ ಆಲಡ್ಕ ಮುಹಮ್ಮದ್ ಅಲಿ ಸಖಾಫಿ ಹಾಗೂ ಇನ್ನಿತರ ಹಲವು ಧಾರ್ಮಿಕ ಸಾಮಾಜಿಕ ನೇತಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

