Thursday, July 10, 2025

ಸಜಿಪ ಪದವಿ ಪೂರ್ವ ಕಾಲೇಜಿಗೆ ಹಳೇ ವಿದ್ಯಾರ್ಥಿಗಳಿಂದ ಕಂಪ್ಯೂಟರ್, ಪ್ರಿಂಟರ್, ಹೈ ಸ್ಪೀಡ್ ಇಂಟರ್ ನೆಟ್ ಕೊಡುಗೆ

ಬಂಟ್ವಾಳ: ಹಳೆವಿದ್ಯಾರ್ಥಿಗಳ ಸಮಾವೇಶದಲ್ಲಿ 30 ದಶಕಗಳ ಇತಿಹಾಸವಿರುವ ಸಜಿಪ ಪದವಿ ಪೂರ್ವ ಕಾಲೇಜಿಗೆ 1994-95 ಬ್ಯಾಚ್ ನ ವಿದ್ಯಾರ್ಥಿಗಳಿಂದ ಕಂಪ್ಯೂಟರ್, ಪ್ರಿಂಟರ್. ಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ 28 ವರುಷದಿಂದ ನಿರಂತರ ಉಪನ್ಯಾಸಕ ಸೇವೆ ಮಾಡಿ ಪ್ರಸ್ತುತ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ಬಾಬು ಗಾವಂಕರ್ ರವರನ್ನು ಹಳೆ ವಿದ್ಯಾರ್ಥಿ ಗಳಿಂದ ಸನ್ಮಾನಿಸಲಾಯಿತು.

ಹಳೆ ವಿದ್ಯಾರ್ಥಿಗಳಲ್ಲಿ ಒಬ್ಬರಾದ.. ಸಿ. ಸಿ. ಬಿ ಪೊಲೀಸ್ ಸೇವೆಯಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳಿಂದ ಚಿನ್ನದ ಪದಕ ಪಡೆದ ಅಬ್ದುಲ್ ಜಬ್ಬಾರ್ ಇವರನ್ನು ಅಭಿನಂದಿಸಲಾಯಿತು. ಹಿರಿಯರಾದ ಕಾಲೇಜಿನ ಮಾಜಿ ಅಧ್ಯಕ್ಷರಾದ ದಿ| ಸದಾನಂದ ಪೂಂಜಾ ಮತ್ತು ವಿದ್ಯಾರ್ಥಿಗಳಾದ ದಿ | ತಾರಾನಾಥ್ ಸಜಿಪ, ದಿ | ಕಿರಣ್ ಅಲಾಡಿ, ಇವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಯಸ್. ಡಿ. ಯಮ್. ಸಿ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಜಿಪ, ಮಹಾಬಲ ರೈ, ಸುರೇಶ್ ಶೆಟ್ಟಿ, ವಿಶ್ವನಾಥ್ ಕೊಟ್ಟಾರಿ, ತಂತ್ರಿಗಳಾದ ಸುಬ್ರಮಣ್ಯ ಭಟ್, ಪ್ರಂಶುಪಾಲರಾದ ಬಾಬು ಗಾವ0ಕರ್ ಉಪಸ್ಥಿತರಿದ್ದರು. ವಕೀಲರಾದ ರೋಷನ್, ಬ್ಯಾಂಕ್ ಮೆನೇಜರ್ ಪುರಂದರ್ ಸಜಿಪ, ಪಿ. ಡಿ. ಓ ನಾಗೇಶ್ ಮಾರ್ತಾಜೆ, ಪೊಲೀಸ್ ಹೆಡ್ ಕಾನ್ಸ್ಟಬಲ್ ಶಾಂತಪ್ಪ ಬಾಬು, ಪ್ರಮೀಳಾ, ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ಉಪನ್ಯಾಸಕರಾದ ವಿಷ್ಣುಮಯ್ಯ ಸ್ವಾಗತಿಸಿ. ಸುಕುಮಾರ್ ಬಂಟ್ವಾಳ್ ಪ್ರಸ್ತಾವನೆ ಗೈದರು, ನಾಗಪ್ಪ ಪಣೋಲಿಬೈಲು ಧನ್ಯವಾದ ನೀಡಿದರು.
ಶಿವಪ್ರಸಾದ್ ಶೆಟ್ಟಿ ಮತ್ತು ಪ್ರಮೀಳಾ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

More from the blog

ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ, ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಸಾಮೂಹಿಕ ವಿವಾಹ..

ಬಂಟ್ವಾಳ : ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ (ಅಬುದಾಬಿ), ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಜುಲೈ 13 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ...

B. C Road : ಹೃದಯಾಘಾತದಿಂದ ಅವಿವಾಹಿತ ಯುವಕ ಸಾವು..

ಬಂಟ್ವಾಳ: ಹೃದಯಾಘಾತದಿಂದ ಸಾವನ್ನಪ್ಪುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದ್ದು, ಒಂದಷ್ಟು ಸುದ್ದಿಯಾಗುತ್ತಿರುವಾಗಲೇ ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ರಾಜಸ್ಥಾನ ಮೂಲದ ನಟವರ್ ಸಿಂಗ್ (27) ಮೃತಪಟ್ಟ ಯುವಕ. ಬಿಸಿರೋಡಿನ ಹೃದಯಭಾಗದಲ್ಲಿ...

Guru Purnima : ಭಾರತೀಯ ಜನತಾ ಪಾರ್ಟಿ ವತಿಯಿಂದ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಜುಲೈ 10 ಗುರುವಾರ ಗುರುಪೂರ್ಣಿಮೆಯಂದು, ಭಾರತೀಯ ಜನತಾ ಪಾರ್ಟಿ ವತಿಯಿಂದ 117ನೇ ಬೂತ್ ನಲ್ಲಿ ಗುರುಗಳನ್ನು ಗುರುತಿಸಿ ಅವರ ಮನೆಗೆ ಹೋಗಿ ಗೌರವಿಸುವ ಗುರುವಂದನಾ ಕಾರ್ಯಕ್ರಮ ನಡೆಯಿತು. ಎಲಬೆ ಪೂವಪ್ಪ ಪೂಜಾರಿಯವರ...

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮುಂದಿನ ಅಧಿವೇಶನದಲ್ಲೇ ಮಸೂದೆ : ಗೃಹ ಸಚಿವ ಜಿ. ಪರಮೇಶ್ವರ್..

ಮಂಗಳೂರು : ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿ ಮೀರುತ್ತಿದೆ. ಈ ಹಿನ್ನಲೆಯಲ್ಲಿ ಸುಳ್ಳು ಸುದ್ದಿ ಹರಡುವುದು ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ಧ ಮುಂದಿನ ಅಧಿವೇಶನದಲ್ಲಿ ಮಸೂದೆ...