ಬಂಟ್ವಾಳ: ಜನತಾಕರ್ಪ್ಯೂ ಸಡಿಲಿಕೆ ಮಾಡಿ ಇಂದು ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿದ್ದೇ ತಪ್ಪಾಯಿತಾ? ಈ ರೀತಿಯಲ್ಲಿ ಆರೋಪಗಳು ಕೂಡ ಕೇಳಿ ಬರುತ್ತಿದೆ.



ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯ ವರಗೆ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಆದರೆ ಈ ಅವಕಾಶ ವನ್ನು ಜನರು ದುರ್ಬಳಕೆ ಮಾಡಿಕೊಂಡು ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದಾರೆ. ಹಾಗೂ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಸಾಮಾಗ್ರಿಗಳನ್ನು ಖರೀದಿ ಮಾಡುವ ದೃಶ್ಯ ಗಳು ಕಂಡು ಬಂದಿದೆ.
ಬೆಳಿಗ್ಗೆ 6 ಗಂಟೆಯಿಂದ ಸುಮಾರು 10 ಗಂಟೆಯ ವರಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೈಲೆಂಟ್ ಅಗಿ ಇದ್ದ ಜನ ಬಳಿಕ ಇಲಾಖಾ ಆದೇಶವನ್ನು ಗಾಳಿಗೆ ತೂರಿ ವರ್ತತಿಸುವು ಆರಂಭವಾಯಿತು.
ಕೆಲವೊಂದು ಕಡೆಗಳಲ್ಲಿ ಅಧಿಕಾರಿಗಳು ಬೇಟಿ ನೀಡಿ ಜನರ ಗುಂಪನ್ನು ಚದುರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದ ಘಟನೆಯೂ ನಡೆಯಿತು.












