ಬಂಟ್ವಾಳ: ಹುಟ್ಟು ಸಾವಿನ ಮಧ್ಯೆ ಸಾಧನೆಯ ಮೂಲಕ ಸಮಾಜಕ್ಕೆ ಸಮರ್ಪಣೆಯಾಗಬೇಕು, ಆಧ್ಯಾತ್ಮದ ಮೂಲಕ ಜೀವನಕ್ಕೆ ಅಂತಿಮ ರೂಪ ನೀಡಬೇಕು ಎಂಬ ಛಲದಿಂದ ಸನ್ಯಾಸ ವೃತವನ್ನು ಆಯ್ಕೆ ಮಾಡಿದ ವಿಶೇಷ ವಾಗಿ ತುಳುನಾಡಿನ ಅಪರೂಪದ ನಾಗಸಾಧು ಓರ್ವ ರ ಡಿಟೈಲ್ ಸ್ಟೋರಿ ನಿಮ್ಮ ಮುಂದೆ ಇದೆ.

ಬಡಬೆಳ್ಳೂರಿನ ದಿ| ರುಕ್ಮಯ ಪೂಜಾರಿಯವರ ಪುತ್ರರಾಗಿರುವ ವಿಠಲ್ ಪೂಜಾರಿ ಅವರೇ ನಾಗಸಾಧು ದೀಕ್ಷೆ ಸ್ವೀಕರಿಸಿರುವ ಸಂತ. ಬಾಲ್ಯದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದು, ಮೈಸೂರಿನಲ್ಲಿ ಧರ್ಮ ಜಾಗರಣದ ಪ್ರಚಾರಕನಾಗಿ ಕೆಲಸ ಮಾಡಿರುವ ಜತೆಗೆ ಆರ್‌ಎಸ್‌ಎಸ್‌ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಬೆಳ್ತಂಗಡಿಯ ವೀರಕೇಸರಿ ಸಂಘಟನೆಯ ಸದಸ್ಯನಾಗಿಯೂ ದುಡಿದಿದ್ದು, ಸಂಘಟನೆಯ ಪದ್ಮನಾಭ ಪೂಜಾರಿ ಸೇರಿದಂತೆ ಮೊದಲಾದವರು ತನಗೆ ನೀಡಿದ ಸಹಕಾರವನ್ನು ಸ್ಮರಿಸುತ್ತಾರೆ.
ಹರಿದ್ವಾರ ಕುಂಭಮೇಳದಲ್ಲಿ ತಪೋನಿಧಿ ಪಂಚಾಯಿತಿ ಆನಂದ್ ಅಖಾಡದ ಪರಮಹಂಸ ಬಾಬಾ ಶ್ರೀ ಬನ್ಖಂಡಿ ಮಹಾರಾಜ್ ಜೀ ಅವರ ಶಿಷ್ಯವಾಗಿ ದೀಕ್ಷೆ ಪಡೆದಿದ್ದು, ತಪೋನಿಧಿ ಬಾಬಾ ವಿಠ್ಠಲ್‌ಗಿರಿ ಮಹಾರಾಜ್ ಜೀ ಎಂಬ ಆಧ್ಯಾತ್ಮದ ಹೆಸರನ್ನು ಪಡೆದಿದ್ದಾರೆ.
ಉತ್ತರ ಭಾರತದ ಬದ್ರಿನಾಥ್, ಹರಿದ್ವಾರ, ಕೇದರ್‌ನಾಥಗಳಿಗೆ ಯಾತ್ರೆ ಮಾಡುತ್ತಾ ಕುಠೀರದಲ್ಲಿ ವಾಸವಾಗಿ ಆಧ್ಯಾತ್ಮದ ಸಾಧನೆ ಮಾಡುತ್ತಿದ್ದಾರೆ.
ನಾಗ ಸಾಧು ಪದವಿ ಸ್ವೀಕರಿಸಿರುವ ಬಾಬಾ ವಿಠ್ಠಲ್‌ಗಿರಿ ಮಹಾರಾಜ್ ಪ್ರತಿಕ್ರಿಯಿಸಿ, ತಾನು ಪ್ರಚಾರವನ್ನು ಬಯಸುವುದಿಲ್ಲ. ದೇವರು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪರಿಶ್ರಮದ ಫಲವಾಗಿ ಗುರುಗಳು ಧೀಕ್ಷೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಜೀವನದುದ್ದಕ್ಕೂ ಬೆಂಬಲ ನೀಡಿದ್ದು, ಮೈಸೂರಿನಲ್ಲಿ ಧರ್ಮಜಾಗರಣದ ಪ್ರಚಾರಕನಾಗಿಯೂ ಕೆಲಸ ಮಾಡಿದ್ದೇವೆ.
