ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುಪುರ ಕೈಕಂಬದ ಭಕ್ತಾದಿಗಳ ಸಭೆ ಕೈಕಂಬದ ಬೆನಕಧಾಮದಲ್ಲಿ ಬ್ರಹ್ಮಕಲಶೋತ್ಸವದ ಅಧ್ಯಕ್ಷರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಅಧ್ಯಕ್ಷರು ಮಾತನಾಡಿ ಸುಮಾರು ಲಕ್ಷಾಂತರ ಭಕ್ತಾದಿಗಳು ಬಾಗಿಯಾಗಲಿದ್ದು ಬ್ರಹ್ಮಕಲಶೋತ್ಸವದ ಯಶಸ್ಸಿಗೆ ನಾವೆಲ್ಲರೂ ಶ್ರಮಪಡಬೇಕಿದೆ ಎಂದರು. ಗುರುಪುರ ಕೈಕಂಬದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮಾರ್ಚ್ 4ರಂದು ಹೊರಡಲಿದ್ದು ಈ ಕಾರ್‍ಯಕ್ರಮವನ್ನು ಯಶಸ್ವಿಗೊಳಿಸುವಚಿತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಮೂಳೂರು ಮುಂಡಿತ್ತಾಯ ದೈವಸ್ಥಾನದ ಮೋಕ್ತೆಸರರಾದ ಪ್ರಮೋದ್ ಕುಮಾರ್ ರೈ, ವಿನೋದ್ ಮಾಡ, ತಾ.ಪಂ ಸದಸ್ಯರಾದ ಸಚಿನ್ ಅಡಪ, ರಾಜೀವ್ ರೈ, ಶ್ರೀಧರ್ ರಾವ್, ಗಣೇಶ್ ಆಚಾರ್ಯ, ವಿ.ಸಿ ಶೇಖರ್, ಹಿರಿಯರಾದ ಹರಿರಾವ್, ಮತ್ತು ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು, ಮಹೇಶ್ ಶೆಟ್ಟಿ ಕಾರ್‍ಯಕ್ರಮ ನಿರ್ವಹಿಸಿ ವಂದಿಸಿದರು.

