ವಿಟ್ಲ: ಸೈಯದ್ ತ್ವಾಹಿರುಲ್ ಅಹ್ದಲ್ (ಖ.ಸಿ)ತಂಙಳರವರ ನೇತೃತ್ವದಲ್ಲಿ ಕಳೆದ ಇಪ್ಪತ್ತೇಳು ವರ್ಷಗಳಿಂದ ಕಾಸರಗೋಡು ಜಿಲ್ಲೆಯ ಪುತ್ತಿಗೆ ಕಟ್ಟತಡುಕ್ಕ ಎಂಬಲ್ಲಿ ಕಾರ್‍ಯಾಚರಿಸುತ್ತಿರುವ ಮುಹಿಮ್ಮಾತ್ ವಿದ್ಯಾ ಸಂಸ್ಥೆಯ ಮಹಾ ಸಮ್ಮೇಳನ ಹಾಗೂ ಉರೂಸ್ ಮುಬಾರಕ್ 2019 ಎಪ್ರಿಲ್ 13,14,15 ರಂದು ನಡೆಯಲಿದೆ. ಇದರ ಪ್ರಚಾರಾರ್ಥವಾಗಿ ಫೆ. 17 ರಂದು ಕರ್ನಾಟಕ ಹಳೆ ವಿದ್ಯಾರ್ಥಿಗಳ ಬೃಹತ್ ಸಂಗಮವು ಮುಹಿಮ್ಮಾತ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಕರುನಾಡಿನ ಆಶಾ ಕೇಂದ್ರವಾದ ಮುಹಿಮ್ಮಾತಿನಲ್ಲಿ ಶೇಕಡ ಎಂಭತ್ತೈದರಷ್ಟು ಕನ್ನಡಿಗರೇ ಆಗಿದ್ದು ಇದೀಗ ಪೂರ್ವ ಕಾಲದಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳ ಸಂಗಮಕ್ಕೆ ಫೆಬ್ರವರಿ 17 ಮುಹಿಮ್ಮಾತ್ ಸಾಕ್ಷಿಯಾಗಲಿದೆ. ಸಯ್ಯಿದ್ ಮುನೀರುಲ್ ಅಹ್ದಲ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್, ಬಿ. ಎಸ್ ಅಬ್ದುಲ್ಲ ಕುಂಞಿ ಫೈಝಿ, ಹಂಝ ಮದನಿ ಮಿತ್ತೂರ್, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರ್, ಅಬ್ದುಲ್ ಅಝೀಝ್ ಮಿಸ್ಬಾಹಿ, ಉಮರ್ ಸಖಾಫಿ ಕರ್ಣೂರ್, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಸಯ್ಯಿದ್ ಶರಫುಧ್ಧೀನ್ ಹಿಮಮಿ ಎರುಮಾಡ್, ಹಾಫಿಲ್ ಸುಫ್ಯಾನ್ ಸಖಾಫಿ , ಮುಸ್ತಫಾ ಹಿಮಮಿ ಮೊಂಟುಗೋಳಿ, ತಾಜುದ್ದೀನ್ ಕರಾಯ,ಅಬೂಬಕರ್ ಹಿಮಮಿ ವಿಟ್ಲ, ಖಲೀಲ್ ಹಿಮಮಿ ಕೊಟ್ಟಮುಡಿ ಮುಂತಾದ ಗಣ್ಯ ವ್ಯಕ್ತಿಗಳು ನೇತೃತ್ವ ವಹಿಸಲಿದ್ದಾರೆ.
ಮುಹಿಮ್ಮಾತಿನ ನಾನಾ ಸಂಸ್ಥೆಗಳಲ್ಲಿ ವಿದ್ಯಾರ್ಜಿಸಿದ ಕರ್ನಾಟಕದ ವಿದ್ಯಾರ್ಥಿಗಳು ಈ ಕಾರ್‍ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕಾಗಿ ಪ್ರಚಾರ ಸಮಿತಿಯ ವಿಟ್ಲ ವಿಭಾಗದ ಎಸ್ ಪಿ. ಹಂಝ ಸಖಾಫಿ ಹಾಗೂ ವಕೀಲ ಶಾಕಿರ್ ಮಿತ್ತೂರು ತಿಳಿಸಿದ್ದಾರೆ.

