ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ದ ಬೆಳವಣಿಗೆಗೆ ಗ್ರಾಹಕರ ಸಹಕಾರ ಸದಾ ಬೇಕು ಎಂದು ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಹೇಳಿದರು.



ಅವರು ಕಲ್ಲಡ್ಕಶ್ರೀ ರಾಮ ಮಂದಿರದ ಮಾಧವ ಸಭಾಭವನದಲ್ಲಿ ನಡೆದ ಕಲ್ಲಡ್ಕ ರೈ.ಸೇ.ಸ.ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರ ಸಂಘಗಳು ಸಹಕಾರ ತತ್ವದಲ್ಲಿ ಕಾರ್ಯನಿರ್ವಹಿಸಲು ಸಂಘದ ಸಿಬ್ಬಂದಿ ಗಳು ಹಾಗೂ ಗ್ರಾಹಕರು ಸದಾ ಬೆನ್ನೆಲುಬು ಅಗಿರುತ್ತಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಹಾಗೂ ಕ್ಲಪ್ತ ಸಮಯದಲ್ಲಿ ಅನುಕೂಲವಾಗುವಂತೆ ವ್ಯವಹಾರ ನಡೆಸಲು ಸಂಘ ಹೆಚ್ಚು ಒತ್ತು ನೀಡಿದೆ ಎಂದರು.
ಕೃಷಿ ಅಭಿವೃದ್ಧಿ, ಆರೋಗ್ಯ ರಕ್ಷಣೆ, ಶಿಕ್ಷಣ ಹೀಗೆ ಅನೇಕ ಯೋಜನೆಗಳನ್ನುಕಾರ್ಯರೂಪಕ್ಕೆ ತರಲು ಸಂಘ ಚಿಂತನೆ ನಡೆಸಿದೆ.
ಸಂಘ ದ ಸದಸ್ಯರಿಗೆ ಹಾಗೂ
ಗ್ರಾಹಕರ ಸಮಗ್ರ ಅಭಿವೃದ್ಧಿ ಚಿಂತನೆ ಮಾಡಿಕೊಂಡು ಹಲವು ಯೋಜನೆಯನ್ನು ಕೈಗೊಂಡಿದ್ದು, ಎಲ್ಲರ ಪ್ರೋತ್ಸಾಹ ಬೇಕು ಎಂದರು.
ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿ.ವು 2020 21 ನೇ ಸಾಲಿನಲ್ಲಿ 321.34 ಕೋ.ರೂ. ವ್ಯವಹಾರ ನಡೆಸಿ1,06,28,051.98 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ತಿಳಿಸಿದ್ದಾರೆ. ಸಂಘವು 3.90 ಕೋ.ರೂ. ಪಾಲುಬಂಡವಾಳ,49.08 ಕೋ.ರೂ. ಠೇವಣಿಯನ್ನು ಹೊಂದಿರುತ್ತದೆ, ಪ್ರಸ್ತುತ ಆರ್ಥಿಕ ವರ್ಷದ ಅಂತ್ಯಕ್ಕೆ ಸದಸ್ಯರಿಂದ ಕೃಷಿ ಸಾಲ 29.02 ಕೋ.ರೂ, ಹಾಗೂ ಕೃಷಿಯೇತರ ಸಾಲ 14.04 ಕೋ.ರೂ.ಸೇರಿ ಒಟ್ಟು ರೂ 43.06 ಕೋ.ರೂ. ಹೊರಬಾಕಿ ಇದೆ ಎಂದರು. ಲೆಕ್ಕಪರಿಶೋಧನಾ ವರದಿಯಂತೆ “ಎ” ಗ್ರೇಡ್ ವರ್ಗೀಕರಣಗೊಂಡಿದೆ. ಗೋಳ್ತಮಜಲು, ಬಾಳ್ತಿಲ, ಅಮ್ಟೂರು, ವೀರಕಂಭ, ಬೋಳಂತೂರು ಈ ಐದು ಗ್ರಾಮಗಳ ಕಾರ್ಯ ವ್ಯಾಪ್ತಿಗೊಳಪಟ್ಟ ಸಂಘವು ಕಲ್ಲಡ್ಕ, ವೀರಕಂಭ ಮತ್ತು ಬೋಳಂತೂರಿನಲ್ಲಿ ಶಾಖೆಗಳನ್ನು ಹೊಂದಿ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದೆ ಎಂದರು. ಕಲ್ಲಡ್ಕ, ವೀರಕಂಭ ಹಾಗೂ ಅಮ್ಟೂರಿನಲ್ಲಿ ಪಡಿತರ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದ್ದು, ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ವಾರದಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಕ್ಯಾಂಪ್ಕೋ ಸಹಯೋಗದೊಂದಿಗೆ ಅಡಿಕೆ ಖರೀದಿ ವ್ಯವಹಾರ ನಡೆಸಲಾಗುತ್ತಿದೆ ಎಂದರು.
ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ., ಕನ್ನಡ ಹಾಗೂ ಆಂಗ್ಲ ಮಾಧ್ಯಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದವ ಪೈಕಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇದೀಗ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಎಲ್ಲಾ ಮಕ್ಕಳನ್ನು ಪ್ರೋತ್ಸಾಹಿಸುವುದೆಂದು ನಿರ್ಧರಿಸಲಾಗಿದೆ ಎಂದರು.
ಮುಂದಿನ ಯೋಜನೆಗಳು 25 ಸಾ.ರೂ.ಒಳಗೆ ಬೆಳೆ ಸಾಲ ಪಡೆದ ಸದಸ್ಯರು ಸಾಲ ಮರುಪಾವತಿ ಅವಧಿಯೊಳಗೆ ಮೃತ ಪಟ್ಟಲ್ಲಿ ಅವರ ಸಾಲವನ್ನು ವಾಯಿದೆಯೊಳಗೆ ಮರುಪಾವತಿಸುವ ಅವರ ವಾರೀಸುದಾರರಿಗೆ ಭಾಗ್ಯನಿಧಿಯಾಗಿ ರೂ 15 ಸಾ.ರೂ. ಹಾಗೂ 25 ಸಾ.ಕ್ಕಿಂತ ಮೇಲಿನ ಸಾಲಗಾರರಿಗೆ ಭಾಗ್ಯನಿಧಿಯಾಗಿ 20 ಸಾ.ರೂ.ವಿತರಿಸಲು ಸಂಘ ತೀರ್ಮಾನಿಸಿದೆ ಎಂದರು.
ಬೆಳೆಸಾಲ ಪಡೆದ ಸದಸ್ಯರು ವಿಶೇಷ ಕಾಯಿಲೆಗೆ ಒಳಗಾದ ಸಾಲಗಾರ ಸದಸ್ಯರಿಗೆ ಹೃದಯದ ಶಸ್ತ್ರ ಚಿಕಿತ್ಸೆಗೆ 50 ಸಾ.ರೂ. ಸ್ಟಂಟ್ ಅಳವಡಿಕೆಗೆ 30 ಸಾ.ರೂ. ಡಯಾಲಿಸಿಸ್ ಗೊಳಪಡುವ ಸದಸ್ಯರಿಗೆ 20 ಸಾ.ರೂ.ವಿತರಿಸಲು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು. ಹಮ್ಮಿಕೊಳ್ಳಲಾಗಿದೆ.
ವಿಶೇಷ ಕಾಯಿಲೆಗೊಳಗಾದ ಬೆಳೆ ಸಾಲಗಾರ ಸದಸ್ಯರಿಗೆ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆ ವೆಚ್ಚದ ಬಿಲ್ಲಿನ ಶೇ. 25 ಅಥವಾ ಗರಿಷ್ಠ ರೂ.50000/- ನೀಡುವ ಹಾಗೂ
ಬೆಳೆಸಾಲ ಸಾಲಗಾರ ಸದಸ್ಯರ ಅವಲಂಬಿತರಿಗೂ ವಿಶೇಷ ಕಾಯಿಲೆಗೆ ಒಳಪಟ್ಟು ಆಸ್ಪತ್ರೆ ವೆಚ್ಚದ ಬಿಲ್ಲಿನ ಶೇ.10 ಅಥವಾ ಗರಿಷ್ಠ 10 ಸಾ.ರೂ ಪರಿಹಾರಧನ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಕಲ್ಲಡ್ಕದಲ್ಲಿ ಪ್ರಸ್ತುತ ಇರುವಂತ ಸಂಘದ ಕಟ್ಟಡವು ಹಳೆಯಾದಾಗಿದ್ದು, ರಸ್ತೆ ಅಗಲೀಕರಣದಿಂದಾಗಿ ಕಟ್ಟಡಕ್ಕೆ ಹಾನಿ ಉಂಟಾಗುವ ಸಂಭವ ಇರುವುದರಿಂದ ಸುಸಜ್ಜಿತವಾದ ನೂತನ ಅಂತಸ್ತಿನ ಕಟ್ಟಡ ನಿರ್ಮಿಸುವ ಬಗ್ಗೆಯು ಯೋಜನೆ ಹಾಕಲಾಗಿದೆಯಲ್ಲದೆ ಬೋಳಂತೂರಿನಲ್ಲಿ ಸಂಘದ ಹೊಸ ಕಟ್ಟಡ ನಿರ್ಮಾಣ ಅಮ್ಟೂರಿನಲ್ಲಿ ಹೊಸ ಶಾಖೆಯನ್ನು ತೆರೆಯುವ ಯೋಚನೆಯು ಇದೆ ಎಂದು ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ತಿಳಿಸಿದ್ದಾರೆ.
ಮಹಾಸಭೆಯ ಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ಹಾಗೂ ಅನಾರೋಗ್ಯ ಪೀಡಿತ ಸದಸ್ಯರಿಗೆ ಸಹಾಯಧನದ ಚೆಕ್ ನೀಡಲಾಯಿತು.
ಕಳೆದ ಅವಧಿಯಲ್ಲಿ ಅನಾರೋಗ್ಯದಿಂದ ಸಾವು ಕಂಡ ಸದಸ್ಯರುಗಳಿಗೆ ಶೃದ್ದಾಂಜಲಿ ಅರ್ಪಿಸಲಾಯಿತು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಸುಧಾಕರ ರೈ, ನಿರ್ದೇಶಕರಾದ ಗಿರಿಯಪ್ಪ ಗೌಡ,ವೆಂಕಟ್ರಾಯ ಪ್ರಭು,ಚಂದ್ರಶೇಖರ ಟೈಲರ್,ನೋಣಯ್ಯ ಎಂ.ಆರ್.ಲೋಕಾನಂದ, ಪೂವಪ್ಪ ಗೌಡ, ಕೊರಗಪ್ಪ ನಾಯ್ಕ್, ಸುರೇಶ್ ಶೆಟ್ಟಿ, ಮಹಾಬಲ ಸಾಲ್ಯಾನ್, ಅರುಣಾ ವಿ.ಭಟ್, ವಿಜಯ ಪ್ರಕಾಶ,
ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಕೆ.ಉಪಸ್ಥಿತರಿದ್ದರು.
ಶಾಖಾ ವ್ಯವಸ್ಥಾಪಕ ಗೋಪಾಲ ಕೆ.ವರದಿ ವಾಚಿಸಿದರು.
ಸಂಘದ ಉಪಾಧ್ಯಕ್ಷ ಬಿ.ಸುಧಾಕರ ರೈ ಸ್ವಾಗತಿಸಿದರು.
ಸದಸ್ಯ ವೆಂಕಟ್ರಾಯ ಪ್ರಭು ವಂದಿಸಿದರು.
ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

