Tuesday, February 3, 2026

ಅದ್ಯತೆಯ ನೆಲೆಯಲ್ಲಿ ಅಭಿವೃದ್ಧಿ ಕಾರ್ಯ: ಶಾಸಕ ಯು.ಟಿ.ಖಾದರ್

ಬಂಟ್ವಾಳ: ಇರಾ‌ ವಲಯ ಕಾಂಗ್ರೆಸ್ ವತಿಯಿಂದ ಗ್ರಾಮದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಯ ಉದ್ದೇಶದಿಂದ ಕಾರ್ಯಕರ್ತರ ಸಭೆಯು ದಿ.ರವೀಂದ್ರ ಕರ್ಕೇರರವರ ಮನೆಯಲ್ಲಿ ಮಂಗಳೂರು ಶಾಸಕರಾದ ಯು.ಟಿ.ಖಾದರ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಇರಾ ಗ್ರಾಮದ ಅಭಿವೃದ್ಧಿಯಲ್ಲಿ ಕ್ಷೇತ್ರ ವಿಂಗಡನೆಯ ಬಳಿಕ ಆದ್ಯತೆಯ ಮೇಲೆ ಹಲವಾರು ಕಾಮಗಾರಿಗಳನ್ನು ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಮತ್ತು ನಾಯಕರ ವಿಶ್ವಾಸ ಪಡೆದು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.


ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಕುರ್ನಾಡು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆ್ಯಗ್ನೇಸ್ ಡಿಸೋಝ, ಉಪಾಧ್ಯಕ್ಷರಾದ ಮೊಯಿದಿನ್ ಕುಂಞಿ, ಮಾಜಿ‌ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಂಪಿಲ, ಪ್ರಮುಖ ನಾಯಕರಾದ ಅಚ್ಯುತ ಪೂಜಾರಿ, ಉಸ್ಮಾನ್ ಕುರಿಯಾಡಿ,ಪುಷ್ಪಲತಾ ಕರ್ಕೇರ, ನಳಿನಾಕ್ಷಿ, ಸಿ.ಎಚ್‌. ಮೊಹಮ್ಮದ್ ಹಾಜಿ, ಎಂ.ಬಿ.ಉಮ್ಮರ್, ಯಾಕುಬ್, ಪ್ರತಾಪ್ ಕರ್ಕೇರ ಇನ್ನಿತರರು ಉಪಸ್ಥಿತರಿದ್ದರು.
ಮಾಜಿ‌ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶ್ರಫ್ ಸಂಪಿಲ ಧನ್ಯವಾದ ಸಲ್ಲಿಸಿದರು.

More from the blog

ರಾಜ್ಯದ ರೈಲ್ವೆ ಯೋಜನೆಗಳಿಗೆ 7748 ಕೋಟಿ ರೂ. ಅನುದಾನ : ಸಚಿವ ವಿ.ಸೋಮಣ್ಣ

ಬೆಂಗಳೂರು : ರಾಜ್ಯದ ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ 7748 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಈ ವಿಚಾರವಾಗಿ ಮಾಹಿತಿ ನೀಡಿದ ಅವರು, 2009ರಿಂದ...

ಐಸಿವೈಎಂ ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ

ಬಂಟ್ವಾಳ: ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ ನಡೆಯಿತು. ಪವಿತ್ರ ಬಲಿಪೂಜೆಯನ್ನು ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ರೆವರೆಂಡ್ ಫ್ರಾನ್ಸಿಸ್ ಕ್ರಾಸ್ತಾ ಮತ್ತು ಲೊರೆಟ್ಟೊ ಸೆಂಟ್ರಲ್...

ಮಂಗಳೂರು ಕರಾವಳಿಯನ್ನು ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಸಂಸದ ಕ್ಯಾ. ಚೌಟ ಮನವಿ

ನವದೆಹಲಿ: ಭಾರತದ ಗ್ರೀನ್‌ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ‘ಕಡಲ ಪವನ ಶಕ್ತಿ’ ('ಸಮುದ್ರ ತೀರದ ಪವನ ಶಕ್ತಿ' Offshore Wind Energy)...

ಅಂಗಡಿ, ಹೋಟೆಲ್ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ – ದರ್ಶನ್ ಎಚ್. ವಿ

ಮಂಗಳೂರು : ಎಲ್ಲಾ ರೀತಿಯ ಅಂಗಡಿ, ಕಂಪನಿ, ಕಚೇರಿಗಳು ಹೋಟೇಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಹೆಸರನ್ನು ನಾಮಫಲಕಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ...