ಬಂಟ್ವಾಳ : ಜ.7 ರಂದು ಹಿರಿಯ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರ ಸಭೆಯು ನೇರಳಕಟ್ಟೆ ಶಾಲೆಯ, ಉರ್ದಿಲ ಗುತ್ತು ಕೆ. ಇಂದು ಹಾಸ ರೈ ಸಭಾ ಭವನದಲ್ಲಿ ನಡೆಯಿತು.

ಈ ಸಭೆಯಲ್ಲಿ ಅತಿಥಿಗಳಾಗಿ ಶಾಲಾ ಎಸ್. ಡಿ. ಎಂ.ಸಿ. ಅಧ್ಯಕ್ಷ ರೋಹಿತಾಶ್ವ, ಉಪಾಧ್ಯಕ್ಷ ಶಾಹುಲ್ ಹಮೀದ್, ಶಾಲಾ ಶತಮಾನೋತ್ಸ ಸಮಿತಿ ಗೌರವ ಅಧ್ಯಕ್ಷರು ಲಕ್ಷ್ಮಿ ಹೆಗ್ಡೆ, ಕಾರ್ಯಧ್ಯಕ್ಷ ನಿರಂಜನ್ ರೈ, ಹಾಗೂ ಜಿಲ್ಲೆಯ ಪ್ರಖ್ಯಾತ ಚಲನ ಚಿತ್ರನಟ ಚೇತನ್ ರೈ, ಚಂದ್ರಹಾಸ ಶೆಟ್ಟಿ ಭಾಗವಹಿಸಿದ್ದರು. ವಿಸ್ತರಿಸಿದ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ರಚನೆಯಾಯಿತು . ಗೌರವ ಅಧ್ಯಕ್ಷ ಶ್ರೀನಿವಾಸ್ ಮೆಲ್ಕಾರ್, ಅಧ್ಯಕ್ಷ ವಿಠ್ಠಲ್ ನಾಯ್ಕ್, ಕಾರ್ಯದರ್ಶಿ ಲತೀಫ್, ಖಜಾಂಚಿ ಗೀತಾ, ಉಪಾಧ್ಯಕ್ಷ ಅಶೋಕ್ ರೈ, ಪ್ರೇಮ ನಾಯ್ಕ್, ರಜಾಕ್ ಸಾಹೇಬ್, ಕ್ರೀಡಾ ಕಾರ್ಯದರ್ಶಿ ಬೇಬಿನಾಯ್ಕ್, ಉಪಕಾರ್ಯದರ್ಶಿ ಪ್ರಕಾಶ್ ರೈ, ಶಶಿಧರ್ ಶೆಟ್ಟಿ, ಬದ್ರುದ್ದಿನ್, ಕಾನೂನು ಸಲಹೆಗರಾರ ಪ್ರೇಮನಾಥ್ ಶೆಟ್ಟಿ, ಸಂಸ್ಕೃತಿಕ ಕಾರ್ಯದರ್ಶಿ ಮೋಹನ್ ಆಚಾರ್ಯ, ಪೂವಪ್ಪ, ಕೂಸಪ್ಪ ಕಲ್ಲೋಳಿಗುಡ್ಡೆ, ಸಂಘಟನಾ ಕಾರ್ಯದರ್ಶಿ ವಿಶು ಕುಮಾರ್, ರಶೀದ್, ಅಥವುಲ್ಲ ನೇರಳಕಟ್ಟೆ, ಉಪೇಂದ್ರ ಆಚಾರ್ಯ, ಚಂದ್ರಶೇಖರ ಪೆರಾಜೆ, ಹರೀಶ್ ನಾಯ್ಕ್ ಎಲ್ಕಜೆ, ಸಂತೋಷ್ ಶೆಟ್ಟಿ, ದಿನಕರ ನಾಯಕ್ ಹಾಗೂ ಗೌರವ ಸಲಹೆಗಾರರು ತನಿಯಪ್ಪ ಗೌಡ, ಕೆ ಶ್ರೀಧರ್ ರೈ, ಡೇನಿಸ್ ಪಾಯಸ್, ಕೆ ಉಮ್ಮರ್ ನೇರಳಕಟ್ಟೆ , ಮೊಹಮ್ಮದ್ ರಫೀಕ್ ಎಸ್ ಎಂ , ಸುರೇಶ್ ರೈ, ರಾಮಚಂದ್ರ ಕುಲಾಲ್, ದಿನೇಶ್ NITK ಚೇತನ್ ರೈ, ಚಂದ್ರಹಾಸ್ ಶೆಟ್ಟಿ ಸಂಘಕ್ಕೆ ಆಯ್ಕೆ ಮಾಡಲಾಯಿತು. ಶಾಲಾ ಅಧ್ಯಾಪಕರಾದ ಸುಧಾಕರ್ ಶೆಟ್ಟಿ ಇವರು ಸಲಹೆ ಸೂಚನೆಯನ್ನು ನೀಡಿದರು.
