ಬಂಟ್ವಾಳ : ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಳೆತನ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯದಲ್ಲಿ ರೋಟರಿ ಮಹತ್ವದ ಕೆಲಸ ಮಾಡುತ್ತದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ ಹೇಳಿದರು.
ಅವರು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಸೇವಾಂಜಲಿ ಸಭಾಂಗಣದಲ್ಲಿ ನೂತನವಾಗಿ ಅಸ್ತಿತ್ವಗೊಳ್ಳಲಿರುವ ರೋಟರಿ ಕ್ಲಬ್ ಫರಂಗಿಪೇಟೆಯ ಪ್ರಾವಿಷನಲ್ ಮೀಟಿಂಗ್ ನಲ್ಲಿ ಪುನಶ್ಚೇತನ ಕಾರ್ಯಾಗಾರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ರೋಟರಿ ಬಳಗವಿರುವಲ್ಲಿ ಎಲ್ಲಾ ವರ್ಗದ ಜನರು ಒಗ್ಗೂಡಿ ಸಾಮರಸ್ಯಕ್ಕೆ ಆದ್ಯತೆ ನೀಡುತ್ತಾರೆ. ಈ ನಿಟ್ಟಿನಲ್ಲಿ ಫರಂಗಿಪೇಟೆಯ ಪ್ರಜ್ಞಾವಂತರು ರೋಟರಿ ಮೂಲಕ ಒಟ್ಟು ಸೇರುವುದು ಶ್ಲಾಘನೀಯ ಎಂದರು. ವೇದಿಕೆಯಲ್ಲಿ ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್, ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ವಲಯ ಸೇನಾನಿ ಸಂಜೀವ ಪೂಜಾರಿ ಗುರುಕೃಪ ,ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಬಂಗೇರ, ಪರಂಗಿಪೇಟೆ ಕ್ಲಬ್ ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಯರಾಮ ಶೇಖ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ನಾರ್ಬರ್ಟ್ ಡಿಸೋಜ ಉಪಸ್ತಿತರಿದ್ದರು.